Header Ads
Header Ads
Breaking News

ಕಾವ್ಯ ಅಸಹಜ ಸಾವು ಪ್ರಕರಣ ಕಾವ್ಯಾ ಮನೆಗೆ ಮೇಯರ್ ಕವಿತಾ ಸನಿಲ್ ಭೇಟಿ ತಂದೆ ತಾಯಿಗೆ ಸಾಂತ್ವಾನ

 

ನಿಗೂಢವಾಗಿ ಸಾವನ್ನಪ್ಪಿದ ಅಳ್ವಾಸ್ ಕಾಲೇಜಿನ ವಿದ್ಯಾರ್ಥಿನಿ ಕಾವ್ಯ ಮನೆಗೆ ಮಂಗಳೂರು ನಗರ ಪಾಲಿಗೆ ಮೇಯರ್ ಕವಿತಾ ಸನಿಲ್ ಭೇಟಿ ನೀಡಿದರು, ಕಾವ್ಯ ತಂದೆ ತಾಯಿ ಬಳಿ ಪ್ರಕರಣದ ಬಗ್ಗೆ ಮಾಹಿತಿ ಪಡೆದು ಅವರಿಗೆ ಸಾಂತ್ವಾನ ನೀಡಿದರು. ನಂತರ ಮಾದ್ಯಮದವರೊಂದಿಗೆ ಮಾತನಾಡಿದ ಮೇಯರ್ ಮಗಳನ್ನು ಕಳಕೊಂಡ ದುಖ:

ತಾಯಿಗೆ ಮಾತ್ರ ಗೊತ್ತು, ಕಾವ್ಯ ತಂದೆ ತಾಯಿ ಹೇಳಿಕೆಗೂ ನಡೆದ ಘಟನೆಗೂ ತುಂಬಾ ವ್ಯತ್ಯಾಸವಿದೆ, ಕಾವ್ಯಳ ಕೊಲೆಯೋ ಅತ್ಮಹತ್ಯೆಯೂ ಗೊತ್ತಿಲ್ಲ. ಆದರೆ ಸರಿಯಾದ ತನಿಖೆಯಿಂದ ಕಾವ್ಯ ಕುಟುಂಬಕ್ಕೆ ನ್ಯಾಯ ದೊರಕಬೇಕು ಸತ್ಯ ಏನೆಂಬುದು ಹೊರಬರಬೇಕು, ಇಂತಹ ಪ್ರಕರಣದಲ್ಲಿ ಯಾರೂ ರಾಜಕೀಯ ಮಾಡಬಾರದು ಎಂದರು ಈ ಸಂದರ್ಭ ಕಾರ್ಪೊರೇಟರ್ ಅಪ್ಪಿ, ಸಬಿತಾ ಮಿಸ್ಕಿತ್ , ಕವಿತಾ ವಾಸು ರತಿಕಲಾ ಅಖಿಲಾ ಅಳ್ವ ಮತ್ತಿತರರು ಇದ್ದರು.
ವರದಿ: ನಿಶಾಂತ್ ಮುಲ್ಕಿ

Related posts

Leave a Reply