Header Ads
Header Ads
Breaking News

ಕಾವ್ಯ ಅಸಹಜ ಸಾವು ಪ್ರಕರಣ: ತನಿಖೆ ಪೂರ್ಣಗೊಳ್ಳದೆ ಆರೋಪಿಯೆಂದು ಬಿಂಬಿಸುವುದು ಸರಿಯಲ್ಲ: ಮೂಡುಬಿದಿರೆ ಬಿಲ್ಲವ ಸಂಘದ ಸ್ಪಷ್ಟನೆ

ಆಳ್ವಾಸ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿನಿ ಕು.ಕಾವ್ಯಳ ಸಾವಿನ ಬಗ್ಗೆ ನಮ್ಮಲ್ಲೇ ಕೆಲವರು, ಮಾಡಿರದ ತಪ್ಪಿಗೆ ತೀರ್ಪು ನೀಡಲು, ಶಿಕ್ಷೆ ವಿಧಿಸಲು ಹೊರಟಿದ್ದಾರೆ. ಕಾವ್ಯಳ ಸಾವು ಕೊಲೆಯೆನ್ನುವುದು ನ್ಯಾಯಾಲಯದ ತನಿಖೆಯಿಂದ ಸಾಬೀತಾದರೆ ತಪ್ಪಿತಸ್ಥರು ಎಷ್ಟೇ ಪ್ರಭಾವಿತರಾಗಿದ್ದರೂ ಶಿಕ್ಷೆಗೊಳಪಡಬೇಕು ಆದರೆ ತನಿಖೆ ಪೂರ್ಣಗೊಳ್ಳದೆ ಯಾರನ್ನೋ ಆರೋಪಿ ಎಂದು ಬಿಂಬಿಸುವುದು ಸೂಕ್ತವಲ್ಲ ಎಂದು ಬ್ರಹ್ಮಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘವು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದೆ.


ಅವರು ಮೂಡುಬಿದಿರೆ ಪ್ರೆಸ್‌ಕ್ಲಬ್‌ನಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಸಂಘದ ಅಧ್ಯಕ್ಷ ರವೀಂದ್ರ ಸುವರ್ಣ ಅವರು ಮಾಹಿತಿ ನೀಡಿದರು. ಮೃತ ಕಾವ್ಯಳ ಮನೆಗೆ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಭೇಟಿ ನೀಡಿ ಸಾಂತ್ವನವನ್ನು ಹೇಳಿದ್ದೇವೆ. ಆದರೆ ವಿಚಾರಣೆ ಆರಂಭಗೊಳ್ಳುವ ಮೊದಲೇ ತೀರ್ಪು ನೀಡುವುದು, ಶಿಕ್ಷಣ ಸಂಸ್ಥೆಯನ್ನು ದೂರುವುದು, ವಿಷಯಾಂತರ ಮಾಡುವುದು ಸಮಂಜಸವಲ್ಲ. ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಯಶಸ್ಸಿನ ವಿರುದ್ಧ ಪೂರ್ವಾಗ್ರಹ ಪೀಡಿತ ಮನಸ್ಸುಗಳು ಈ ಕೆಲಸವನ್ನು ವ್ಯವಸ್ಥಿತವಾಗಿ ಮಾಡುತ್ತಿದ್ದು ಇದನ್ನು ನಾವು ಖಂಡಿಸುತ್ತೇವೆ ಎಂದು ತಿಳಿಸಿದರು.

ಪುರಸಭಾ ಸದಸ್ಯರಾದ ದಿನೇಶ್ ಪೂಜಾರಿ, ಲಕ್ಷ್ಮಣ್ ಪೂಜಾರಿ, ಸಂಘದ ಉಪಾಧ್ಯಕ್ಷ ವಾಸು ಪೂಜಾರಿ, ಮಾಜಿ ಅಧ್ಯಕ್ಷ ಪೂವಪ್ಪ ಕುಂದರ್, ಸಂಘದ ಗೌರವಾಧ್ಯಕ್ಷ ನಾರಾಯಣ ಪಿ.ಎಂ, ಕಾರ್ಯದರ್ಶಿ ಸದಾನಂದ.ಬಿ, ಮುಖಂಡರುಗಳಾದ ಜಯರಾಮ್ ಕೋಟ್ಯಾನ್, ಶಶಿಧರ್ ಅಂಚನ್, ನವೀನ್‌ಚಂದ್ರ ಕರ್ಕೇರಾ, ರವೀಂದ್ರ ಕರ್ಕೇರಾ ಮತ್ತಿತರರು ಉಪಸ್ಥಿತರಿದ್ದರು.
ವರದಿ: ಪ್ರೇಮಶ್ರೀ ಮೂಡಬಿದರೆ

Related posts

Leave a Reply