Header Ads
Header Ads
Breaking News

ಕಾಸರಗೋಡನ್ನು ಕ್ಯಾನ್ಸರ್ ಮುಕ್ತ ಜಿಲ್ಲೆಯನ್ನಾಗಿಸಿ ಕ್ರಮ ಕಾಸರಗೋಡು ಜಿ.ಪಂ ಹಾಗೂ ಆರೋಗ್ಯ ಇಲಾಖೆ ನೇತೃತ್ವದಲ್ಲಿ ಜಾಗೃತಿ

ಕಾಸರಗೋಡನ್ನು ಕ್ಯಾನ್ಸರ್ ಮುಕ್ತ ಜಿಲ್ಲೆಯನ್ನಾಗಿಸಿ ಪರಿವರ್ತಿಸಲು ಕ್ರಮ ವಹಿಸಿಲಾಗಿದೆ. ಇನ್ನು ಕಾಸರಗೋಡು ಜಿಲ್ಲಾ ಪಂಚಾಯತ್ ಹಾಗೂ ಆರೋಗ್ಯ ಇಲಾಖೆಯ ಜಂಟಿ ಆಶ್ರಯದಲ್ಲಿ ಕಾರ್ಯಕ್ರಮದ ಮೊದಲ ಹಂತವಾಗಿ ಮಾಹಿತಿ ಪ್ರಕ್ರಿಯೆಗೆ ಚಾಲನೆ ದೊರಕಿತು. 

ಈ ಸಂಬಂಧ ಕಾಸರಗೋಡು ಜಿಲ್ಲಾಧಿಕಾರಿ ಜೀವನ್ ಬಾಬು ರವರಿಂದ ಪ್ರಮುಖ ಮಾಹಿತಿಗಳನ್ನು ಸಂಗ್ರಹಿಸುವ ಮೂಲಕ ಜಿಲ್ಲಾಧಿಕಾರಿಯವರ ವಸತಿಯಲ್ಲಿ ಜಿಲ್ಲಾಪಂಚಾಯತ್ ಅಧ್ಯಕ್ಷ ಎ.ಜಿ.ಸಿ ಬಶೀರ್ ಚಾಲನೆ ನೀಡಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಜಿಲ್ಲಾ ಪಂಚಾಯತ್ ಅಧ್ಯಕ್ಷ ಜಿಲ್ಲೆಯ 38 ಗ್ರಾಮ ಪಂಚಾಯತ್. ಹಾಗೂ 3 ನಗರ ಸಭೆಗಳನ್ನು ಕೇಂದ್ರೀಕರಿಸಿಕೊಂಡು ಜಿಲ್ಲಾ ಪಂಚಾಯತ್ ಆರೋಗ್ಯ ಇಲಾಖೆಯ ಸಹಕಾರದೊಂದಿಗೆ ಪ್ರತ್ಯೇಕವಾಗಿಯೂ ತಲಶ್ಯೇರಿಯ ಎಂ ಸಿ ಸಿ ಯ ಸಹಭಾಗಿತ್ವದೊಂದಿಗೆ ಈ ಒಂದು ಕ್ಯಾನ್ಸರ್ ಪ್ರತಿರೋಧ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಈ ಸಂದರ್ಭ ವೈದ್ಯರುಗಳಾದ ಶಾಹಿನಾ, ರವೀಂದ್ರ ನಾಯ್ಕ್, ರಾಜೇಶ್, ಸುಧೀರ್, ಶಮೀಮಾ ಸೇರಿದಂತೆ ಹಲವರು ಪಾಲ್ಗೊಂಡರು.

Related posts

Leave a Reply