Header Ads
Header Ads
Breaking News

ಕಾಸರಗೋಡಿನಲ್ಲಿ ಸಿಪಿಐಎಂ ನಿಂದ ಭ್ರ್ರಷ್ಟಾಚಾರವನ್ನು ವಿರೋಧಿಸಿ ಧರಣಿ

 ಕಾಸರಗೋಡು ನಗರ ಸಭೆಯಲ್ಲಿ ನಡೆಯುತ್ತಿರುವ ಬ್ರಷ್ಟಾಚಾರವನ್ನು ವಿರೋಧಿಸಿ ಸಿಪಿಐಎಂ ಮುನ್ಸಿಪಲ್ ಸಮಿತಿಯ ಮುಂದಾಳತ್ವದಲ್ಲಿ ನಗರ ಸಭಾ ಕಚೇರಿಗೆ ಪ್ರತಿಭಟನಾ ಧರಣಿ ನಡೆಸಿದರು.ಕಾಸರಗೋಡು ಹೊಸ ಬಸ್ಸು ನಿಲ್ದಾಣ ಪರಿಸರದಿಂದ ಪ್ರತಿಭಟನಾ ಮೆರವಣಿಗೆಗೆ ಚಾಲನೆ ದೊರಕಿತು. ಬಳಿಕ ನಗರ ಸಭಾ ಕಚೇರಿ ಮುಂಬಾಗದಲ್ಲಿ ನಡೆದ ಪ್ರತಿಭಟನಾ ಧರಣಿಗೆ ಸಿಪಿಐ (ಎಂ) ರಾಜ್ಯ ಸಮಿತಿ ಸದಸ್ಯ ಸಿ ಎಚ್ ಕುಞಂಬು ಪ್ರತಿಭಟನೆ ಉದ್ದೇಶಿಸಿ ಮಾತನಾಡಿ ಅಧಿಕಾರದ ವಿರುದ್ದ ಯಾರಾದರೂ ಅಪಸ್ವರವನ್ನು ಎತ್ತಿದರೆ ಅವರ ಜೇಬನ್ನು ತುಂಬಿಸಿ ಜೊತೆಯಗಿರಿಸಿಕೊಳ್ಳುವುದು ಲೀಗ್ ನ ಜಾಯಮಾನವಾಗಿದೆಂಬುದಾಗಿ ಆರೋಪಿಸಿದ ಅವರು ಇಂತಹ ಪಕ್ಷ ಜಗತ್ತಿನಲ್ಲಿ ಎಲ್ಲಿಯೂ ಕಾಣಲು ಸಾಧ್ಯವಿಲ್ಲವೆಂಬುದಾಗಿ ಹೇಳಿದರು.ಪ್ರತಿಭಟನಾ ಮೆರವಣಿಗೆಯಲ್ಲಿ ಹಾಗೂ ಧರಣಿಯಲ್ಲಿ ಹಲವಾರು ಮಂದಿ ಪಾಲ್ಗೊಂಡರು.  

Related posts

Leave a Reply