Header Ads
Breaking News

ಕಾಸರಗೋಡಿನಲ್ಲಿ ಸೋಮವಾರವೂ ಕೋವಿಡ್19 ಹೊಸ ಪ್ರಕರಣವಿಲ್ಲ

ಮಂಜೇಶ್ವರ: ಕಾಸರಗೋಡು ಜಿಲ್ಲೆಯಲ್ಲಿ ಸೋಮವಾರ ಕೂಡ ಹೊಸ ಕೊರೊನಾ ಸೋಂಕು ತಗಲಿರುವ ಪ್ರಕರಣ ದಾಖಲಾಗಿಲ್ಲ.ಜಿಲ್ಲೆಯಲ್ಲಿ ಸೋಮವಾರ ಸೋಂಕು ಬಾಧಿತರ ರಿಕವರಿ ರೇಟ್ ಶೇ. 96.6 ಆಗಿದೆ. ಜಿಲ್ಲೆಯಲ್ಲಿ ಈ ವರೆಗೆ 172 ಮಂದಿ ಗುಣಮುಖರಾಗಿದ್ದಾರೆ. 4812 ಮಂದಿಯ ಸ್ಯಾಂಪಲ್ ತಪಾಸಣೆಗೆ ಕಳುಹಿಸಲಾಗಿದೆ. 4144 ಮಂದಿಯ ಫಲಿತಾಂಶ ನೆಗೆಟಿವ್ ಆಗಿದೆ. 340 ಮಂದಿಯ ಫಲಿತಾಂಶ ಲಭಿಸಿಲ್ಲ. ಜಿಲ್ಲೆಯಲ್ಲಿ ಈಗ 6 ಮಂದಿ ಪಾಸಿಟವ್ ರೋಗಿಗಳಿದ್ದಾರೆ. ಕೇರಳ ರಾಜ್ಯದಲ್ಲಿ ಕೂಡಾ ಸೋಮವಾರ ಹೊಸದಾಗಿ ಕೊರೊನಾ ವೈರಸ್ ಸೋಂಕು ಪ್ರಕರಣ ಕಂಡು ಬಂದಿಲ್ಲ. ಅದೇ ವೇಳೆ 61ಮಂದಿ ಗುಣಮುಖರಾಗಿದ್ದಾರೆಂದು ಮುಖ್ಯಮಂತ್ರಿ ತಿಳಿಸಿದ್ದಾರೆ. ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ ಕೇವಲ 34 ಮಂದಿ ಮಾತ್ರವೇ ಚಿಕಿತ್ಸೆಯಲ್ಲಿದ್ದಾರೆ. ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕು ಹರಡುವುದನ್ನು ತಡೆಯಲು ಸಾಧ್ಯವಾಗುತ್ತಿರುವುದು ಸಮಾಧಾನಕರವಾಗಿದ್ದರೂ, ವಿದೇಶದಲ್ಲಿ ಮತ್ತು ಅನ್ಯರಾಜ್ಯಗಳಲ್ಲಿ ಕೇರಳದ 80 ಕ್ಕೂ ಅಧಿಕ ಮಂದಿ ಸಾವಿಗೀಡಾಗಿರುವುದು ದು:ಖಕರವೆಂದು ಮುಖ್ಯಮಂತ್ರಿ ಹೇಳಿದರು.

Related posts

Leave a Reply

Your email address will not be published. Required fields are marked *