Header Ads
Header Ads
Breaking News

ಕಾಸರಗೋಡಿನಲ್ಲಿ ಹಿಂಸಾತ್ಮಕ ಘಟನೆ : ಕಲ್ಲೆಸೆತ, ಲಾಠಿಚಾರ್ಜ್ ನಿಂದ ಹಲವು ಮಂದಿ ಗಾಯ

ಕಾಸರಗೋಡಿನಲ್ಲಿ ರವಿವಾರ ನಡೆದ ಹಿಂದೂ ಸಮಾಜೋತ್ಸವ ಮುಗಿಸಿ ತೆರಳುತ್ತಿದ್ದ ಸಂದರ್ಭದಲ್ಲಿ ಕಾಸರಗೋಡು ನಗರ ಹಾಗೂ ಇತರ ಕಡೆಗಳಲ್ಲಿ ಹಿಂಸಾತ್ಮಕ ಘಟನೆ ನಡೆದಿದ್ದು, ಕಲ್ಲೆಸೆತ ಹಾಗೂ ಲಾಠಿಚಾರ್ಜ್‌ನಿಂದ ಹಲವು ಮಂದಿ ಗಾಯಗೊಂಡಿದ್ದಾರೆ. ಕಾಸರಗೋಡು ಪ್ರೆಸ್ ಕ್ಲಬ್ ಜಂಕ್ಷನ್, ಉಳಿಯತ್ತಡ್ಕ, ಎಸ್.ಪಿ.ನಗರ ಮೊದಲಾದೆಡೆ ಕಲ್ಲೆಸೆತ ನಡೆದಿದೆ.

ಉಳಿಯತ್ತಡ್ಕದಲ್ಲಿ ವ್ಯಾಪಾರ ಮಳಿಗೆ ಹಾಗೂ ವಾಹನಗಳ ಮೇಲೆ ಕಲ್ಲೆಸೆತ ನಡೆದಿದ್ದು, ಪೊಲೀಸರು ಬಲವಂತವಾಗಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸಿದ್ದು, ದೌರ್ಜನ್ಯ ನಡೆಸಿರುವುದಾಗಿ ವರ್ತಕರು ದೂರಿದ್ದಾರೆ. ಕೃತ್ಯವನ್ನು ಖಂಡಿಸಿ ಉಳಿಯತ್ತಡ್ಕ ಪೇಟೆಯಲ್ಲಿ ಇಂದು ಬೆಳಿಗ್ಗೆ ಆರರಿಂದ ಮಧ್ಯಾಹ್ನ ಒಂದರ ತನಕ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಪ್ರತಿಭಟನೆ ನಡೆಸಲಾಯಿತು.

Related posts

Leave a Reply