Header Ads
Header Ads
Breaking News

ಕಾಸರಗೋಡಿನಿಂದ ತಲಪಾಡಿಯವರೆಗೆ ಹೆದ್ದಾರಿಯದ್ದೇ ಸಮಸ್ಯೆ..! ಅಧಿಕಾರಿಗಳ ಪೊಳ್ಳು ಭರವಸೆಗೆ ಜನತೆ ಆಕ್ರೋಶ..!

ಒಂದೆಡೆ ಹೊಂಡ ಗುಂಡಿಗಳು.. ಇನ್ನೊಂದೆಡೆ ಸರಕು ಸಾಗಾಟ ಲಾರಿಗಳು ಮತ್ತೊಂದೆಡೆ ರಸ್ತೆಯಿಂದ ಎದ್ದೇಳುವ ಧೂಳು ಎಲ್ಲಾ ಸೇರಿದಾಗ ಹೆದ್ದಾರಿಯ ಸಂಚಾರ ನರಕ ಸದೃಶವಾಗುತ್ತಿದೆ. ಅಷ್ಟಕ್ಕೂ ಈ ದೃಶ್ಯ ಕಂಡು ಬಂದಿದ್ದು ಎಲ್ಲಿ ಅಂತೀರಾ ಹಾಗಾದ್ರೆ ಈ ಸ್ಟೋರಿ ನೋಡಿ..
ಹೌದು.. ಕಾಸರಗೋಡಿನಿಂದ ತಲಪಾಡಿಯವರೆಗೆ ಹೆದ್ದಾರಿಯಲ್ಲಿ ಹೊಂಡ ಗುಂಡಿಗಳಿದ್ದು, ಸಂಚಾರ ಸಮಸ್ಯೆಗೆ ಟ್ಟಿಯಾಗಿ ಪರಿಣಮಿಸಿದೆ. ಇಲ್ಲಿಯ ಜನ ಈ ಬಗ್ಗೆ ಎಷ್ಟೇ ಆಕ್ರೋಶ ವ್ಯಕ್ತಪಡಿಸಿದ್ರೂ, ನಾಗರಿಕ ಕಣ್ಣಿಗೆ ಮಣ್ಣೆರಚಲು ದುರಸ್ತಿಗೆ ಮುಂದಾದ್ರು. ಆದ್ರೆ ಇದು ಮೊದಲಿಗಿಂತಲೂ ಹೆಚ್ಚಿನ ರೀತಿಯ ಸಮಸ್ಯೆಯನ್ನು ತಂದೊಡ್ಡಿದೆ.
ಜಲ್ಲಿ ಹಾಕಿ ಡಾಮರೀಕರಣ ನಡೆಸದೇ ಇರುವುದರಿಂದ ಮತ್ತೆ ಇಲ್ಲಿ ಹೊಂಡಗಳು ಸೃಷ್ಟಿಯಾಗಿ ಧೂಳು ಆವರಿಸಿದೆ. ದುರಸ್ತಿಯ ಖರ್ಚು ನೀರಿನಲ್ಲಿಟ್ಟ ಹೋಮದಂತಾಯಿತೆಂಬುದಾಗಿ ನಾಗರಿಕರು ಆಡಿಕೊಳ್ಳುತ್ತಿದ್ದಾರೆ. ಕಾಸರಗೋಡಿನಿಂದ ತಲಪಾಡಿ ತಲುಪಲು ಈ ಮೊದಲು ೫೦ ನಿಮಿಷ ಬೇಕಾಗಿದ್ದರೆ ಈಗ ಸುಮಾರು ಎರಡು ತಾಸಿಗಿಂತಲೂ ಹೆಚ್ಚು ಸಮಯ ತಗಲುತ್ತಿದೆ.
ಸಾಲು ಸಾಲಾಗಿ ಸಂಚರಿಸುವ ವಾಹನಗಳ ದಟ್ಟಣೆ ಹೆದ್ದಾರಿಯಲ್ಲಿ ಸಂಚಾರಕ್ಕೆ ಕಂಟಕವಾಗಿ ಪರಿಣಮಿಸಿವೆ. ಮಳೆಗಾಲ ದೂರವಾದ ಹಿನ್ನೆಲೆಯಲ್ಲಿ ಜನಪ್ರತಿನಿಧಿಗಳು ಹಾಗು ಅಧಿಕಾರಿಗಳು ಇತ್ತ ಕಡೆ ಗಮನ ಹರಿಸುವಂತೆ ಆಗ್ರಹಿಸಿದ್ದಾರೆ.

Related posts

Leave a Reply

Your email address will not be published. Required fields are marked *