Header Ads
Breaking News

ಕಾಸರಗೋಡಿನ ಮಂಜೇಶ್ವರದ ಭಾಗದಲ್ಲಿ ಈಗಲೂ ಜೀವಂತ ಸರ್ಪಕೋಲ

ಮಂಜೇಶ್ವರ: ಮಂಜೇಶ್ವರ ಭಾಗದಲ್ಲಿ ಈಗಲೂ ಸರ್ಪಕೋಲವನ್ನು ಕಾಣಲು ಸಾಧ್ಯ. ಕರಾವಳಿಯಲ್ಲಿ ಭೂತಕೋಲ ನಡೆಯುವಂತೆ ಸರ್ಪಕೋಲವೂ ನಡೆಯುತ್ತದೆ. ದ.ಕ/ಉಡುಪಿ ಜಿಲ್ಲೆಗಳಲ್ಲಿ ಈ ಸರ್ಪಕೋಲ ಅಳಿವಿನಂಚಿನಲ್ಲಿದ್ದರೂ ಕಾಸರಗೋಡು ಜಿಲ್ಲೆಯ ಮಂಜೇಶ್ವರದಲ್ಲಿ ಇದು ಇನ್ನೂ ಜೀವಂತವಿದೆ. ಮಂಜೇಶ್ವರದ ಐಸ್ರಾಲಗುತ್ತು ನಾಗಬನ ಸಹಿತ ಹಲವೆಡೆ ಅಪರೂಪದ ಈ ಸರ್ಪಕೋಲವನ್ನು ನಮಗೆ ನೋಡಬಹುದು.

ಸರ್ಪಕೋಲದಲ್ಲಿ ಇಬ್ಬರು ಪಾತ್ರಧಾರಿಗಳು ಇರುತ್ತಾರೆ. ಒಬ್ಬರು ಪಾತ್ರಧಾರಿ ಮತ್ತೊಬ್ಬರು ಮಂತ್ರವಾದಿ ಪಾತ್ರಧಾರಿ. ಸರ್ಪದೈವವನ್ನು ತನ್ನ ಮೈಮೇಲೆ ಆವಾಹಿಸಿಕೊಳ್ಳುವ ಪಾತ್ರಧಾರಿ ಅಡಕೆಯ ಹಾಳೆಯಲ್ಲಿ ರಚಿಸಿದ ಸರ್ಪದಹೆಡೆಯ ಮುಖವಾಡವನ್ನು ಹಲ್ಲಲ್ಲಿ ಕಚ್ಚಿಕೊಂಡು ಧರಿಸಿರುತ್ತಾನೆ. ಹಾವಿನಂತೆ ತೆವಲುತ್ತಾ, ಮಲಗುತ್ತಾ ನಿಧಾನಕ್ಕೆ ಸಂಚರಿಸುವ ಸರ್ಪ ಪಾತ್ರಧಾರಿಗೆ ಎಲೆಗಳನ್ನು ಎರಚುವ ಮೂಲಕ ಮಂತ್ರವಾದಿ ಕೋಪಗೊಳಿಸುತ್ತಾನೆ. ಇದೇ ರೀತಿ ಕೋಲಪೂರ್ತಿ ಸರ್ಪವನ್ನು ಸುಸ್ತುಗೊಳಿಸಿ ಮಂತ್ರಧಾರಿಯವ ವಶಪಡಿಸಿಕೊಳ್ಳುತ್ತಾನೆ. ಅಲ್ಲಿಗೆ ಊರಿಗೆ, ನಾಡಿನ ಜನರಿಗೆ ಅಥವಾ ಸರ್ಪಕೋಲ ನಡೆಸುವ ಕುಟುಂಬಕ್ಕೆ ಅಂಟಿದ ಸರ್ಪ ಕಂಟಕಗಳು ಪರಿಹಾರವಾಯ್ತು ಎಂದರ್ಥ. ಬಾಕುಡ ಸಮುದಾಯದ 18 ದೇವಸ್ಥಾನಗಳಲ್ಲಿ ಮಾರ್ಚ್ ತಿಂಗಳಲ್ಲಿ ಈ ಕೋಲ ನಡೆಯುತ್ತವೆ.
ತುಳುನಾಡಿನಲ್ಲಿ ಪಂಜುರ್ಲಿ, ಧೂಮಾವತಿ ,ಉಲ್ಲಾಲ್ತಿ ಮೊದಲಾದ ದೈವಗಳಿಗೆ ಕೋಲ ಕೊಟ್ಟು ಆರಾಧಿಸುವಂತೆ ಬಾಕುಡರು ಸರ್ಪಗಳನ್ನು ಕೋಲ ಕೊಟ್ಟು ಆರಾಧಿಸುತ್ತಾರೆ .ಇದನ್ನು ಸರ್ಪ ಕೋಲ ,ನಾಗ ನಲಿಕೆ ಬೆರ್ಮೆರ್ ನಲಿಕೆ ಎಂದು ಕರೆಯುತ್ತಾರೆ.

Related posts

Leave a Reply

Your email address will not be published. Required fields are marked *