Header Ads
Header Ads
Breaking News

ಕಾಸರಗೋಡು ಅಂಚೆ ಕಚೇರಿಯಲ್ಲಿ ಸೇವೆಗಳು ಸ್ಥಗಿತ ಸಾರ್ವಜನಿಕರಿಗೆ ಭಾರೀ ಸಮಸ್ಯೆ

 

ಮಂಜೇಶ್ವರ: ಇಂಟರ್ ನೆಟ್ ಉಪಕರಣಗಳು ಹೊತ್ತಿ ಉರಿದು ನಾಶಗೊಂಡ ಹಿನ್ನೆಲೆಯಲ್ಲಿ ಕಾಸರಗೋಡು ಪ್ರಧಾನ ಅಂಚೆ ಕಚೇರಿಯಲ್ಲಿ ಹಲವು ಸೇವೆಗಳು ಸ್ಥಗಿತಗೊಂಡಿವೆ.
ಕಳೆದ ೧೦ ದಿನಗಳಿಂದ ವಿವಿಧ ಅತ್ಯವಶ್ಯಕಗಳಿಗಾಗಿ ಕಚೇರಿಗೆ ಆಗಮಿಸುತ್ತಿರುವ ನಾಗರಿಕರು ಸೇವೆ ಲಭಿಸಿದೆ ಹಿಂತಿರುಗುತ್ತಿರುವ ದೃಶ್ಯ ಕಂಡು ಬರುತ್ತಿದೆ.
ಎ.ಟಿ.ಎಂ ಸೇರಿದಂತೆ ಇತರ ಹಲವು ಸೇವೆಗಳು ಸ್ಥಗಿತಗೊಂಡಿವೆ. ಇಂಟರ್ ನೆಟ್ ಮೋಡಂ ಯಾವಾಗ ತಲುಪ ಬಹುದೆಂಬುದಾಗಿ ಖಾಸಗಿ ಕಂಪನಿ ಅಧಿಕೃತರು ಈ ತನಕ ಯಾವುದೇ ಮಾಹಿತಿ ನೀಡಿಲ್ಲವೆಂಬುದಾಗಿ ಅಂಚೆ ಕಚೇರಿ ಅಧಿಕಾರಿಗಳು ಹೇಳುತಿದ್ದಾರೆ.


ಹಳೆಯ ಮೋಡಂ ಈಗಾಗಲೇ ಕಳುಹಿಸಿ ಕೊಡಲಾಗಿದ್ದರೂ ಹೊಸ ಮೋಡಂ ಅನ್ನು ಕಳುಹಿಸಲು ಕಂಪನಿ ಅಧಿಕೃತರು ಈ ತನಕ ತಯಾರಾಗಿಲ್ಲವೆನ್ನಲಾಗಿದೆ.
ಎಟಿ‌ಎಂ ನಲ್ಲಿ ಪ್ರತಿ ದಿನ ಐದು ಲಕ್ಷ ರೂ. ಗಳನ್ನು ಜಮಾ ಮಾಡಲಾಗುತಿತ್ತು. ಈ ಹಿನ್ನೆಲೆಯಲ್ಲಿ ಎ.ಟಿ.ಎಂ ಇದೀಗ ಮುಚ್ಚುಗಡೆಯಾಗಿರುವುದು ಸಾರ್ವಜನಿಕರಿಗೆ ಭಾರೀ ಸಮಸ್ಯೆಯಾಗಿ ಪರಿಣಮಿಸಿದೆ. ಪೋಸ್ಟಲ್ ಇನ್ಸೂರೆನ್ಸ್ ಸೇವೆ ಕೂಡಾ ತತಸ್ಥಗೊಂಡಿದೆ. ಹಲವು ಆವಶ್ಯತೆಗಳಿಗಾಗಿ ಅಂಚೆ ಕಚೇರಿಗೆ ಆಗಮಿಸುತ್ತಿರುವ ನಾಗರಿಕರು ಸೇವೆ ಲಭಿಸದ ಹಿನ್ನೆಲೆಯಲ್ಲಿ ಸಂಬಂಧ ಪಟ್ಟವರಿಗೆ ಹಿಡಿ ಶಾಪ ಹಾಕುತಿದ್ದಾರೆ.

ವರದಿ: ರೇಹಮಾನ್ ಉದ್ಯಾವರ

Related posts

Leave a Reply