Header Ads
Header Ads
Breaking News

ಕಾಸರಗೋಡು ಜಿಲ್ಲೆಯ ಠಾಣೆಗಳಲ್ಲಿ ಮಕ್ಕಳ ವಿರುದ್ಧ 404 ಪ್ರಕರಣಗಳು ದಾಖಲು

ಮಂಜೇಶ್ವರ: ಪೊಲೀಸ್, ಮೋಟಾರು ವಾಹನ ಇಲಾಖೆಗಳ ತಪಾಸಣೆಗಳು ನಿರಂತರವಾಗಿ ನಡೆಯುತ್ತಿದ್ದರೂ ಅಪ್ರಾಪ್ತ ಮಕ್ಕಳ ಅಪಾಯಕಾರಿ ವಾಹನ ಚಾಲನೆಗೆ ತಡೆ ಬಿದ್ದಿಲ್ಲ. ಇದರಿಂದ ಹಲವಾರು ಜೀವಗಳು ಬಲಿಯಾಗುತ್ತಿವೆ. ಕಳೆದ 11ತಿಂಗಳೊಳಗೆ ಪರವಾನಗಿ ಇಲ್ಲದೆ ವಾಹನ ಚಲಾಯಿಸಿದ್ದಕ್ಕೆ ಮಂಜೇಶ್ವರ, ಕುಂಬಳೆ, ಬದಿಯಡ್ಕ ಸೇರಿದಂತೆ ಕಾಸರಗೋಡು ಜಿಲ್ಲೆಯ ಪೊಲೀಸ್ ಠಾಣೆಗಳಲ್ಲಿ ಮಕ್ಕಳ ವಿರುದ್ಧ404ಪ್ರಕರಣಗಳು ದಾಖಲಾಗಿವೆ.ಇದರಲ್ಲಿ ಹೆಚ್ಚಿನವು ಮಂಜೇಶ್ವರ, ಕಾಸರಗೋಡು ಸಬ್ ಸ್ಟೇಷನ್ ವ್ಯಾಪ್ತಿಯವುಗಳಾಗಿವೆ. ಪರವಾನಗಿ ಇಲ್ಲದೆ, ಹೆಲ್ಮೆಟ್ ಧರಿಸದೆ, ಸೀಟ್ ಬೆಲ್ಟ್ ಹಾಕದೆ ವಾಹನ ಚಲಾಯಿಸಿದ್ದಕ್ಕೆ ಅಪ್ರಾಪ್ತ ಮಕ್ಕಳ ರಕ್ಷ ಕರು ಅಥವಾ ವಾಹನ ಮಾಲೀಕರ ವಿರುದ್ಧ ಕೇಸು ದಾಖಲಿಸಲಾಗಿದೆ. ಆದರೆ ತಪಾಸಣೆ ಸಿಬ್ಬಂದಿಯನ್ನು ಗಮನಿಸಿ ಬೇರೆ ದಾರಿಯಾಗಿ ಹೋಗುವವರ ಸಂಖ್ಯೆ ಹೆಚ್ಚುತ್ತಿದೆ.


ಮಂಜೇಶ್ವರದಲ್ಲಿ ಖಾಸಗಿ ಶಾಲೆಗಳ ವಿದ್ಯಾರ್ಥಿಗಳಲ್ಲಿ ಹೆಚ್ಚಿನವರು ಬೈಕ್, ಕಾರುಗಳಲ್ಲಿ ಶಾಲೆಗೆ ಬರುತ್ತಾರೆ. ಇವರಲ್ಲಿ ಹೆಚ್ಚಿನವರಿಗೆ ಪರವಾನಗಿ ಪಡೆಯುವ ಪ್ರಾಯವೂ ಆಗಿಲ್ಲ. ಪರವಾನಗಿ ಇಲ್ಲದವರು ವಾಹನಗಳನ್ನು ಶಾಲೆಗೆ ತರಬಾರದು ಎಂದು ನಿರ್ದೇಶನ ಇರುವುದರಿಂದ ಹಲವು ವಿದ್ಯಾರ್ಥಿಗಳು ಸಮೀಪದ ಪ್ರದೇಶಗಳಲ್ಲಿ ವಾಹನಗಳನ್ನು ಬಚ್ಚಿಡುವುದು ಸಾಮಾನ್ಯವಾಗಿದೆ.

ಬೈಕ್‌ಗಳಲ್ಲಿ ಹೆಲ್ಮೆಟ್ ಧರಿಸದೆ ಮೂವರನ್ನು ಕುಳಿತುಕೊಳ್ಳಿಸಿ ಅಮಿತ ವೇಗದಲ್ಲಿ ಪಾದಚಾರಿಗಳಿಗೆ ಭೀತಿ ಸೃಷ್ಟಿಸಿ ಮಕ್ಕಳು ವಾಹನ ಚಲಾಯಿಸುವುದನ್ನು ಕಾಣಲು ಕಾಸರಗೋಡಿನ ಯಾವುದಾದರೂ ರಸ್ತೆ ಬದಿ ನಿಂತರೆ ಸಾಕು. ಅಪ್ರಾಪ್ತ ಬಾಲಕರು ಮಾತ್ರವಲ್ಲದೆ ಬಾಲಕಿಯರು ಕೂಡ ವಾಹನ ಚಲಾಯಿಸುವುದು ಕಂಡುಬರುತ್ತಿದೆ. ಇಷ್ಟೋಂದು ಅಪಘಾತ ಸಂಭವಿಸಿ ಸಾವುಗಳು ಸಂಭವಿಸುತ್ತಲೇ ಇದ್ದರೂ ಇನ್ನೂ ಪೋಷಕರು ಅಪ್ರಾಪ್ತ ವಯಸ್ಸಿನ ಮಕ್ಕಳಲ್ಲಿ ಧ್ವಿಚಕ್ರ ವಾಹನಗಳನ್ನು ಚಲಾಯಿಸಲು ನೀಡುತ್ತಿರುವುದು ವಿಪರ್ಯಾಸವೆಂದೇ ಹೇಳಬಹುದು.
ಒಳ ಪ್ರದೇಶದಲ್ಲಿರುವ ಖಾಸಗಿ ಶಾಲೆಯತ್ತಿರ ಕಾನೂನು ಪಾಲಕರು ಒಮ್ಮೆ ಕಣ್ಣು ಹಾಯಿಸಿದರೆ ಇದಕ್ಕೊಂದು ನಿಯಂತ್ರಣ ತರಬಹುದೆಂಬುದಾಗಿ ಊರವರು ಹೇಳುತಿದ್ದಾರೆ. ಮಕ್ಕಳು ವಾಹನ ಚಲಾಯಿಸಬಾರದು ಎಂದು ತಂದೆ-ತಾಯಿಯಂದಿರು ಅರಿವು ನೀಡದಿರುವುದು ಅಪಾಯಗಳಿಗೆ ಕಾರಣವಾಗುತ್ತಿದೆ ಎಂದು ಪೊಲೀಸರು ಹೇಳುತ್ತಿದ್ದಾರೆ.

Related posts

Leave a Reply