Header Ads
Breaking News

ಕಾಸರಗೋಡು ಜಿಲ್ಲೆ ಆರೆಂಜ್ ಝೋನ್ : ಮೇ 17ರ ತನಕ ಲಾಕ್ ಡೌನ್ ಮುಂದುವರಿಕೆ

ಕೇಂದ್ರ ಆರೋಗ್ಯ ಸಚಿವಾಲಯ ಕಾಸರಗೋಡು ಜಿಲ್ಲೆಯನ್ನು ರೆಡ್ ಝೋನ್‍ನಿಂದ ಆರೆಂಜ್ ಝೋನ್‍ಗೆ ಸೇರ್ಪಡೆಗೊಳಿಸಿದೆ. ಕೇರಳದಲ್ಲಿ ಕಣ್ಣೂರು ಮತ್ತು ಕೋಟ್ಟಯಂ ಜಿಲ್ಲೆಗಳು ಮಾತ್ರವೇ ರೆಡ್ ಝೋನ್‍ನಲ್ಲಿವೆ. ರಾಜ್ಯದ 10 ಜಿಲ್ಲೆಗಳು ಆರೆಂಜ್ ಝೋನ್‍ನಲ್ಲೂ, ಎರಡು ಜಿಲ್ಲೆಗಳು ಗ್ರೀನ್ ಝೋನ್‍ನಲ್ಲಿದೆ. ಆದರೆ ಕೇಂದ್ರ ಗೃಹ ಸಚಿವಾಲಯ ಲಾಕ್ ಡೌನ್ ನನ್ನು ಮೇ 17ರ ತನಕ ಮುಂದುವರಿಸಿದೆ.

ಕಾಸರಗೋಡು ಜಿಲ್ಲೆಯಲ್ಲಿ ಕಾಂಞಂಗಾಡ್ ನಗರಸಭೆ, ಉದುಮ ಹಾಗು ಪಳ್ಳಿಕೆರೆ ಗ್ರಾಮ ಪಂಚಾಯತ್‍ಗಳನ್ನು ಹಾಟ್ ಸ್ಪಾಟ್‍ಗಳಿಂದ ಹೊರತುಪಡಿಸಲಾಗಿದೆ. ಎಲ್ಲಾ ರೋಗಿಗಳು ಈ ಮೊದಲೇ ರೋಗ ಮುಕ್ತರಾಗಿದ್ದರೂ ಕಾಂಞಂಗಾಡ್ ನಗರಸಭೆ ಹಾಟ್‍ಸ್ಪಾಟ್ ಯಾದಿಯಲ್ಲಿ ಮುಂದುವರಿಸಲಾಗಿತ್ತು. ಶುಕ್ರವಾರ ಈ ಯಾದಿಯಿಂದ ಹೊರತುಪಡಿಸಲಾಯಿತು. ಪ್ರಸ್ತುತ ಕಾಸರಗೋಡು ನಗರಸಭೆ, ಚೆಂಗಳ, ಚೆಮ್ನಾಡ್, ಮುಳಿಯಾರು, ಮೊಗ್ರಾಲ್ ಪುತ್ತೂರು, ಅಜಾನೂರು, ಉದುಮ ಗ್ರಾಮ ಪಂಚಾಯತ್‍ಗಳು ಹಾಟ್‍ಸ್ಪಾಟ್‍ಗಳಲ್ಲಿವೆ.

Related posts

Leave a Reply

Your email address will not be published. Required fields are marked *