Header Ads
Breaking News

ಕಾಸರಗೋಡು ತಲಪಾಡಿ ರಾ.ಹೆಯಲ್ಲಿ ಅರ್ಧಂಬರ್ಧ ಕಾಮಗಾರಿ : ಸಾರ್ವಜನಿಕರಿಂದ ಗುತ್ತಿಗೆದಾರನ ವಿರುದ್ಧ ವ್ಯಾಪಕ ಆಕ್ರೋಶ

ಮಂಜೇಶ್ವರ: ಹಲವು ಪ್ರತಿಭಟನೆಗಳ ಬಳಿಕ ಸರಕಾರದ ಗಮನ ಸೆಳೆದ ಸಂಪೂರ್ಣವಾಗಿ ಹದೆಗೆಟ್ಟ ಕಾಸರಗೋಡು ತಲಪಾಡಿ ರಾಷ್ಟ್ರೀಯ ಹೆದ್ದಾರಿ ಮರು ಡಾಮಾರೀಕರಣಕ್ಕೆ ಕೊನೆಗೂ ಸರಕಾರ ಕೋಟ್ಯಾಂತರ ರೂ. ಮಂಜೂರು ಮಾಡಿ ಗುತ್ತಿಗೆದಾರನಿಗೆ ಗುತ್ತಿಗೆ ನೀಡಿದೆ. ಆದರೆ ಅರ್ಧಂಬರ್ಧ ಕಾಮಗಾರಿ ನಡೆಸಿ ಗುತ್ತಿಗೆದಾರ ಪರಾರಿಯಾಗಿದ್ದು, ಗುತ್ತಿಗೆದಾರನ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಸರ್ಕಾರದಿಂದ ಅನುದಾನ ಮಂಜೂರಾದರೂ ರಾಷ್ಟ್ರೀಯ ಹೆದ್ದಾರಿಯನ್ನು ಪೂರ್ಣಗೊಳಿಸದೆ ಕುಂಜತ್ತೂರು, ಉದ್ಯಾವರ, ಮಂಜೇಶ್ವರ ಪೊಸೋಟುಗಳಲ್ಲಿ ಸಣ್ಣ ಪ್ರಮಾಣದಲ್ಲಿದ್ದ ಗುಂಡಿಗಳು ಇದೀಗ ಬೃಹತಾಕಾರವಾಗಿದೆ. ಈ ಬಗ್ಗೆ ತಲೆಕೆಡಿಸಿಕೊಳ್ಳದ ಇಂಜಿನಿಯರ್ ಆಗಲೀ ಗುತ್ತಿಗೆದಾರನಾಗಲೀ ಇತ್ತ ಕಡೆ ತಿರುಗಿಯೂ ನೋಡಲಿಲ್ಲವೆಂಬುದಾಗಿ ಸ್ಥಳೀಯರು ಆರೋಪಿಸುತ್ತಿದ್ದಾರೆ. ಕಾಮಗಾರಿಯನ್ನು ಪೂರ್ಣಗೊಳಿಸದೇ ಇದ್ದಲ್ಲಿ ಲೋಕೋಪಯೋಗಿ ಇಲಾಖೆಗೆ ಮುತ್ತಿಗೆ ಹಾಕುವುದಾಗಿ ಸ್ಥಳೀಯರು ಮುನ್ನೆಚ್ಚರಿಕೆ ನೀಡಿದ್ದಾರೆ.

Related posts

Leave a Reply

Your email address will not be published. Required fields are marked *