Header Ads
Breaking News

ವಾಮಂಜೂರು ಸೇತುವೆಯ ತಡೆಗೋಡೆ ಕುಸಿತ: ವಾಹನ ಸವಾರರಿಗೆ ಕಾದಿದೆ ಕಂಟಕ!

ಮಂಜೇಶ್ವರ: ಕಾಸರಗೋಡು-ಮಂಗಳೂರು ರಾಷ್ಟ್ರೀಯ ಹೆದ್ದಾರಿ ವಾಮಂಜೂರು ತಪಾಸಣಾ ಕೇಂದ್ರದ ಸಮೀಪದಲ್ಲಿರುವ ಸೇತುವೆಯ ತಡೆಗೋಡೆ ಕುಸಿದು ತಿಂಗಳುಗಳೇ ಕಳೆದರೂ ಅಪಾಯದಂಚಿನಲ್ಲಿರುವ ಈ ಸೇತುವೆಯ ತಡೆಗೋಡೆಯನ್ನು ಇನ್ನೂ ಸರಿಪಡಿಸದೇ ಇರುವುದು ಸ್ಥಳೀಯರಲ್ಲಿ ಆತಂಕವನ್ನು ಸೃಷ್ಟಿಸಿದೆ. ಶಿಥಿಲಗೊಂಡಿರುವ ಈ ಸೇತುವೆಯ ಒಂದು ಭಾಗದ ತಡೆಗೋಡೆಯು ಕುಸಿದಿದೆ. ಈ ಹೆದ್ದಾರಿ ಮೂಲಕ ಪ್ರತಿದಿನ ಸಾವಿರಾರು ವಾಹನಗಳು ಹಾದು ಹೋಗುತ್ತಿದ್ದು ಸೇತುವೆ ಕೂಡಾ ದುರ್ಬಲಗೊಂಡಿದ್ದು ಇದರ ತಡೆಗೋಡೆಗಳು ಕುಸಿದಿರುವುದರಿಂದ ಅಪಘಾತದ ಸಾಧ್ಯತೆಯೂ ಹೆಚ್ಚಾಗಿದೆ.

Related posts

Leave a Reply

Your email address will not be published. Required fields are marked *