Header Ads
Header Ads
Breaking News

ಕಾಸರಗೋಡು :ಮಾದಕ ವಸ್ತು ಜಾಲದ ಪ್ರಮುಖ ಆರೋಪಿಯ ಬಂಧನ

ಕಾಸರಗೋಡಿನ ಮಾದಕ ವಸ್ತು ಜಾಲದ ಪ್ರಮುಖ ರೂವಾರಿಯಾದ ಯುವಕನೋರ್ವನನ್ನು ಕಾಸರಗೋಡು ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ..

ಬಂಧಿತನನ್ನು ತಳಂಗರೆ ಕಾಪ್ರಾಮ್ ನ ಮುಹಮ್ಮದ್ ಅದ್ನಾನ್ (24) ಎಂದು ಗುರುತಿಸಲಾಗಿದೆ. ಶುಕ್ರವಾರ ಸಂಜೆ ತಳಂಗರೆ ಯಿಂದ ಈತನನ್ನು ಬಂಧಿಸಲಾಗಿದ್ದು, ಈತನಿಂದ ಭಾರೀ ಬೆಲೆ ಬಾಳುವ ಮಾದಕ ವಸ್ತುವನ್ನು ವಶಪಡಿಸಿಕೊಳ್ಳಲಾಗಿದೆ. ಪೊಲೀಸರಿಗೆ ಲಭಿಸಿದ ಖಚಿತ ಮಾಹಿತಿಯಂತೆ ಕಾಸರಗೋಡು ನಗರ ಠಾಣಾ ಸಬ್‌ಇನ್ಸ್ ಪೆಕ್ಟರ್ ಅಜಿತ್ ಕುಮಾರ್ ನೇತೃತ್ವದ ತಂಡವು ಕಾರ್ಯಾಚರಣೆ ನಡೆಸಿತು.
ವಿದ್ಯಾರ್ಥಿಗಳನ್ನು ಕೇಂದ್ರೀಕರಿಸಿ ಈ ಮಾದಕ ವಸ್ತುಗಳನ್ನು ಈತ ಸಾಗಾಟ ಮಾಡುತ್ತಿದ್ದ ಎಂದು ಪೊಲೀಸರಿಗೆ ಮಾಹಿತಿ ಲಭಿಸಿದೆ. ಈ ಮಾದಕ ವಸ್ತು ಬೆಲೆ ಗ್ರಾಂ ಗೆ ಮೂರು ಸಾವಿರ ರೂ ಎಂದು ಪೊಲೀಸರು ತಿಳಿಸಿದ್ದಾರೆ. ವಾರದ ಹಿಂದೆ ಗಾಂಜಾ ಸೇದುತ್ತಿದ್ದಾಗ ಪೊಲೀಸರು ಈತನನ್ನು ಬಂಧಿಸಿದ್ದರು.

ಬಳಿಕ ಜಾಮೀನಿನಲ್ಲಿ ಬಿಡುಗಡೆ ಗೊಂಡಿದ್ದನು. ಈತನ ಚಲನವಲನಗಳ ಬಗ್ಗೆ ನಿಗಾ ಇರಿಸಿದ್ದ ಪೊಲೀಸರು ಮಾದಕ ವಸ್ತು ಸಹಿತ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಾರ್ಯಾಚರಣೆಯಲ್ಲಿ ಪೊಲೀಸ್ ಅಧಿಕಾರಿಗಳಾದ ರಘುನಂದನ್, ಪ್ರದೀಪನ್,ಅಬ್ದುಲ್ ಸಲಾಂ, ಮನು, ನಿಯಾಜ್, ಸನೋಜ್, ಥಾಮಸ್ ಮೊದಲಾದವರು ನೇತೃತ್ವದಲ್ಲಿ ಬಂಧಿಸಿದ್ದಾರೆ.

Related posts

Leave a Reply