Header Ads
Header Ads
Breaking News

ಮಂಜೇಶ್ವರ: ನಾಶದ ಹಂತದಲ್ಲಿ ತಪಾಸಣಾ ಕೇಂದ್ರ.

ಮಂಜೇಶ್ವರ: ಮಂಜೇಶ್ವರದ ವಾಮಂಜೂರಿನಲ್ಲಿ ಕಾರ್ಯಾಚರಿಸುತಿದ್ದ ಮಂಜೇಶ್ವರ ಮಾರಾಟ ತೆರಿಗೆ ತಪಾಸಣಾ ಕೇಂದ್ರ ಮುಚ್ಚುಗಡೆಗೊಂಡ ಬಳಿಕ ಈ ಕಚೇರಿಯ ಕಟ್ಟಡಗಳು ಉಪಯೋಗ ಶೂನ್ಯವಾಗಿದ್ದು, ನಾಶದ ಹಂತದಲ್ಲಿದ್ದರೂ ಸಂಬಂಧ ಪಟ್ಟ ಅಧಿಕಾರಿಗಳು ಇತ್ತ ಕಡೆ ಗಮನ ಹರಿಸುವುದಿಲ್ಲವೆಂಬ ಆರೋಪ ವ್ಯಾಪಕವಾಗಿ ಕೇಳಿ ಬರುತ್ತಿದೆ.

ವರ್ಷಗಳ ಹಿಂದೆ ಜಿಎಸ್ಟಿ ಜಾರಿಗೊಂಡ ಬಳಿಕ ತಪಾಸಣಾ ಕೇಂದ್ರವನ್ನು ತೆರವುಗೊಳಿಸಲಾಗಿತ್ತು. ಆ ತನಕ ತಪಾಸಣಾ ಕೇಂದ್ರ ಕಾರ್ಯಾಚರಿಸುತಿದ್ದ ಕಟ್ಟಡಗಳು ಸಂಪೂರ್ಣವಾಗಿ ಮುಚ್ಚುಗಡೆಗೊಂಡಿದೆ. ಜೊತೆಗೆ ರಾಷ್ಟ್ರೀಯ ಹೆದ್ದಾರಿಯ ಇಕ್ಕಡೆಗಳಲ್ಲಿರುವ ಟೋಕನ್ ಕೌಂಟರುಗಳು ಕೂಡಾ ಸಂಪೂರ್ಣ ನಾಶದ ಹಂತದಲ್ಲಿದೆ. ಅದೇ ರೀತಿ ಇದೇ ಪರಿಸರದಲ್ಲಿ ಸ್ಥಾಪಿಸಲಾಗಿದ್ದ ಪೊಲೀಸ್ ಸಹಾಯ ಕೇಂದ್ರ ಕೂಡಾ ಉಪಯೋಗ ಶೂನ್ಯವಾಗಿದೆ.

ಮಂಜೇಶ್ವರದಲ್ಲಿ ಹಲವು ಸರಕಾರಿ ಕಚೇರಿಗಳು ಬಾಡಿಗೆ ಕಟ್ಟಡದಲ್ಲಿ ಕಾರ್ಯಾಚರಿಸುತಿದ್ದು, ಅವುಗಳನ್ನು ಈ ಮುಚ್ಚುಗಡೆಗೊಂಡ ಕಟ್ಟಡಗಳಿಗೆ ಸ್ಥಳಾಂತರಿಸಬಹುದಾದರೂ ಸಂಬಂಧಪಟ್ಟವರು ಅದಕ್ಕೆ ಮುತುವರ್ಜಿ ವಹಿಸದೇ ಇರುವುದು ಕಟ್ಟಡಗಳ ನಾಶಕ್ಕೆ ಇನ್ನೊಂದು ಕಾರಣವಾಗಿದೆ. ವಾಮಂಜೂರು ಚೆಕ್ ಪರಿಸರದಲ್ಲಿ ಸ್ಪೆಷಲ್ ಸ್ಕ್ವಾಡ್ ಗಳ ಒಂದು ವಾಹನ ಹಾಗೂ ರಾ.ಹೆದ್ದಾರಿ ಬದಿಯಲ್ಲಿ ಒಂದು ಕೌಂಟರ್ ಅದರಲ್ಲಿ ಇಬ್ಬರು ಮಾತ್ರ ಇರುವುದು ಕಂಡು ಬರುತ್ತಿದೆ.

ಇದರ ಹೊರತಾಗಿ ಇದೇ ತಪಾಸಣಾ ಕೇಂದ್ರದ ಪರಿಸರದಲ್ಲಿ ತಪಾಸಣಾ ಕೆಂದ್ರದ ಪುರೋಗತಿಗಾಗಿ ಖರೀದಿಸಲಾದ10 ಎಕ್ರೆ ಸ್ಥಳ ಕೂಡಾ ಉಪಯೋಗ ಶೂನ್ಯವಾಗಿದೆ. ಸ್ಥಳ ಹಾಗೂ ಕಟ್ಟಡ ಸರಕಾರದ್ದೆಂಬ ಕಾರಣಕ್ಕೆ ಬೆಲೆಬಾಳುವ ಈ ಎರಡೂ ಪಾಳು ಬಿದ್ದಿರುವುದನ್ನು ಕಂಡೂ ಕಾಣದಂತೆ ಅಧಿಕಾರಿಗಳು ಜಾಣ ಕುರುಡುತನವನ್ನು ಪ್ರದರ್ಶಿಸುತ್ತಿರುವುದಾಗಿ ನಾಗರಿಕರ ಆರೋಪ\

 

Related posts

Leave a Reply