Header Ads
Breaking News

ಮಂಜೇಶ್ವರದಲ್ಲಿ ತ್ಯಾಜ್ಯ ಎಸೆದ ಲಾರಿ ಚಾಲಕನಿಗೆ ದಂಡ ವಿಧಿಸಿದ ಅಧಿಕಾರಿಗಳು

ಮಂಜೇಶ್ವರ: ರಾಷ್ಟ್ರೀಯ ಹೆದ್ದಾರಿ ಬಳಿಯ ಸಾರ್ವಜನಿಕ ಸ್ಥಳದಲ್ಲಿ ತ್ಯಾಜ್ಯವನ್ನು ಎಸೆಯುತ್ತಿರುವ ಬಗ್ಗೆ ಸ್ಥಳೀಯರು ನೀಡಿದ ಮಾಹಿತಿಯಂತೆ ಸ್ಥಳಕ್ಕಾಗಮಿಸಿದ ಮಂಜೇಶ್ವರ ಪಂ. ಅಧಿಕೃತರು ಆಂಧ್ರ ಪ್ರದೇಶದವನಾಗಿರುವ ಲಾರಿ ಚಾಲಕನನ್ನು ಸೆರೆ ಹಿಡಿದು ಲಾರಿಯನ್ನು ವಶಕ್ಕೆ ತೆಗೆದು ದಂಡ ವಿಧಿಸಿದ ಬಳಿಕ ಬಿಟ್ಟು ಕೊಟ್ಟಿದ್ದಾರೆ.

ಕೆಲ ವಾರಗಳ ಹಿಂದೆ ಈ ಪರಿಸರವನ್ನು ಸ್ಥಳೀಯರು ಹಾಗೂ ವಿವಿಧ ಸಂಘಟನೆಗಳ ಕಾರ್ಯಕರ್ತರ ಸೇವೆಯೊಂದಿಗೆ ಸ್ವಚ್ಚಗೊಳಿಸಲಾಗಿತ್ತು. ಈ ಮಧ್ಯೆ ಲಾರಿ ಚಾಲಕ ಹಾಡು ಹಗಲಲ್ಲೇ ತ್ಯಾಜ್ಯವನ್ನು ಉಪೇಕ್ಷಿಸಲು ಮುಂದಾದದ್ದು ಹಲವರ ಆಕ್ರೋಶಕ್ಕೂ ಕಾರಣವಾಗಿತ್ತು. ಮಂಜೇಶ್ವರ ಗ್ರಾ. ಪಂ. ಕಾರ್ಯದರ್ಶಿ ಉಸ್ತುವಾರಿಯಿರುವ ಶೈಲೇಶ್, ಸಿಬ್ಬಂದಿ, ವಿಪಿನ್ ಲಾಲ್, ಉಪಾಧ್ಯಕ್ಷ ರಫೀಕ್ ಕಾರ್ಯಾಚರಣೆ ವೇಳೆ ಉಪಸ್ಥತರಿದ್ದರು.

ತ್ಯಾಜ್ಯ ಸಂಗ್ರಹವಾಗುತ್ತಿರುವ ಸ್ಥಳಗಳಲ್ಲಿ ಗ್ರಾ. ಪಂ. ವತಿಯಿಂದ ಸಿಸಿ ಕ್ಯಾಮರಾಗಳನ್ನು ಸ್ಥಾಪಿಸಿ ಅದರ ಆಧಾರದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ತ್ಯಾಜ್ಯವನ್ನು ಎಸೆಯುತ್ತಿರುವವರ ವಿರುದ್ದ ಯಾವುದೇ ಮುಲಾಜಿಲ್ಲದೆ ಸಂಬಂಧಪಟ್ಟವರು ಕ್ರಮಕ್ಕೆ ಮುಂದಾಗಬೇಕೆಂಬುದಾಗಿ ಸಾರ್ವಜನಿಕರು ಆಗ್ರಹಿಸಿದ್ದಾರೆ. ಚಾಲಕನಿಂದ ದಂಡ ವಸೂಲಿ ಮಾಡಿದ ಬಳಿಕ ವಾಹನವನ್ನು ಬಿಟ್ಟು ಕೊಡಲಾಯಿತು.

 

Related posts

Leave a Reply

Your email address will not be published. Required fields are marked *