Header Ads
Breaking News

ಕಿಡಿಗೇಡಿಗಳಿಂದ ಅವಹೇಳನ ಬರಹ, ಸಾರ್ವಜನಿಕರಿಗೆ ಮಾಹಿತಿ ಇದ್ದಲ್ಲಿ ಪೊಲೀಸ್ ಇಲಾಖೆಯ ಗಮನಕ್ಕೆ ತನ್ನಿ : ಮಂಗಳೂರು ಪೊಲೀಸ್ ಅಯುಕ್ತ ಎನ್. ಶಶಿಕುಮಾರ್ ಮನವಿ

ಇತ್ತೀಚೆಗೆ ಕೆಲವು ಧಾರ್ಮಿಕ ಕೇಂದ್ರಗಳಲ್ಲಿ ಅನುಚಿತ ವಸ್ತುಗಳನ್ನು ಅಸಹ್ಯ ರೀತಿಯಲ್ಲಿ ಇರುವ ಕೆಲ ಬರವಣಿಗೆಗಳನ್ನು ಹಾಕಿರುವುದು ನಮ್ಮ ಗಮನಕ್ಕೆ ಬಂದಿದೆ. ಈ ಬಗ್ಗೆ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ಕೂಡ ದಾಖಲಾಗಿದೆ ತಕ್ಷಣ ಆರೋಪಿಗಳನ್ನು ಬಂಧನ ಮಾಡಲಾಗುವುದು ಎಂದು ಮಂಗಳೂರು ಪೊಲೀಸ್ ಆಯುಕ್ತರಾದ ಎನ್. ಶಶಿಕುಮಾರ್ ಮನವಿಯನ್ನು ಮಾಡಿದರು. 

ಈ ಬಗ್ಗೆ ತಮ್ಮ ಕಚೇರಿಯಲ್ಲಿ ಪ್ರತಿಕ್ರಿಯೆ ನೀಡಿ, ಈ ರೀತಿಯ ಕೃತ್ಯದಲ್ಲಿ ತೊಡಗಿಕೊಂಡವರನ್ನು ಪತ್ತೆ ಮಾಡುತ್ತೇವೆ. ಧಾರ್ಮಿಕ ಕೇಂದ್ರಗಳಲ್ಲಿ ಸಿಸಿಟಿವಿ ಅಳವಡಿಸಿ, ಸಾರ್ವಜನಿಕರು ಇಂತಹ ಕೃತ್ಯಗಳ ಬಗ್ಗೆ ಮಾಹಿತಿ ಇದ್ದಲ್ಲಿ ಸಮೀಪದ ಪೊಲೀಸ್ ಠಾಣೆಗಳ ಗಮನಕ್ಕೆ ತನ್ನು. ಸಾರ್ವಜನಿಕರು ಜವಾಬ್ದಾರಿ ತೆಗೆದುಕೊಂಡು ಪೊಲೀಸರಿಗೆ ಇಂತಹ ಘಟನೆಗಳ ಬಗ್ಗೆ ಮಾಹಿತಿ ನೀಡುವುದರಿಂದ ಕೃತ್ಯದಲ್ಲಿ ಭಾಗಿಯಾದವರನ್ನು ಹಿಡಿಯಲು ಸಹಕಾರಿಯಾಗುತ್ತದೆ. ಈ ಬಗ್ಗೆ ಪೊಲೀಸ್ ಕಂಟ್ರೋಲ್ ರೂಂ ನಂ 9480802300ಗೆ ವಾಟ್ಸ್ ಆಫ್ ಅಥವಾ ಮೇಸೇಜ್ ಮೂಲಕ ಮಾಹಿತಿಯನ್ನು ನೀಡಿ ಎಂದ ಪೊಲೀಸ್ ಆಯುಕ್ತರು, ಮಂಗಳೂರು ಸುಂದರ ನಗರ ಇಲ್ಲಿ ಕಿಡಿಗೇಡಿಗಳು ಮಾಡುವಂತಹ ಕೃತ್ಯದಿಂದ ಮಂಗಳೂರು ಬ್ರ್ಯಾಂಡ್ ಹಾಳಾಗಬಾರದು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಮಾಹಿತಿ ವಿನಿಮಯ ಮಾಡಿಕೊಳ್ಳುವ ಮೂಲಕ ಸಹಕರಿಸಿ ಎಂದು ಸಾರ್ವಜನಿಕರನ್ನು ಪೊಲೀಸ್ ಕಮಿಷನರ್ ಎನ್ ಶಶಿಕುಮಾರ್ ಹೇಳಿದರು.

Related posts

Leave a Reply

Your email address will not be published. Required fields are marked *