Header Ads
Breaking News

ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವ ಸಂಕೇಶ ನಿವಾಸಿ ಜಯಂತಿ : ಡಯಾಲಿಸಿಸ್ ಮಾಡಲು ಬೇಕಾಗಿದೆ ಆರ್ಥಿಕ ನೆರವು

ಬೋಳ್ಯಾರು ಸಮೀಪದ ಒಡಕಿನ ಕಟ್ಟೆಯ ಸಂಕೇಶ ನಿವಾಸಿ ಕೃಷ್ಣ ಕುಲಾಲ್ ಅವರು ಬಡತನದಿಂದಲೇ ಜೀವನ ಸಾಗಿಸುತ್ತಿದ್ದರು. ಇದೀಗ ಈ ಕುಟುಂಬಕ್ಕೆ ಬರ ಸಿಡಿಲು ಬಡಿದಂತಾಗಿದೆ. ಕೃಷ್ಣ ಕುಲಾಲ್ ಅವರ ಓರ್ವ ಸಹೋದರಿ ಜಯಂತಿ ಎಂಬವರಿಗೆ ಕಿಡ್ನಿ ಸಮಸ್ಯೆ ಉಂಟಾಗಿದ್ದು, ಡಯಾಲಿಸಿಸ್ ಮಾಡಲು ಇದೀಗ ಆರ್ಥಿಕ ಸಮಸ್ಯೆ ಉಂಟಾಗಿದೆ. ಸಮಾಜದ ಬಂಧುಗಳು ತಮ್ಮಿಂದಾಗುವ ಸಹಾಯವನ್ನು ಮಾಡಿ ಎಂದು ಕೃಷ್ಣ ಕುಲಾಲ್ ಅವರು ವಿನಂತಿಸಿಕೊಂಡಿದ್ದಾರೆ.

ಬಂಟ್ವಾಳ ತಾಲೂಕಿನ ಬೋಳ್ಯಾರು ಸಮೀಪದ ಒಡಕಿನ ಕಟ್ಟೆಯ ಸಂಕೇಶ ನಿವಾಸಿ ಕೃಷ್ಣ ಕುಲಾಲ್ ಅವರಿಗೆ ನಾಲ್ಕು ಮಂದಿ ಸಹೋದರಿಯರು. ಬಡತನದ ಕಾರಣಕ್ಕಾಗಿ ಮೂರು ಮಂದಿ ಸಹೋದರಿಯರ ಸಹಿತ ತಾನು ಇನ್ನೂ ಅವಿವಾಹಿತನಾಗಿರುವ ಇವರಿಗೆ ಜೀವನ ನಿರ್ವಹಣೆಯೇ ದೊಡ್ಡ ಸವಾಲು. ಪೈಂಟಿಂಗ್ ಸಹಾಯಕರಾಗಿ ದುಡಿಯುವ ಇವರಿಗೆ ಸಿಗುವ ಅತ್ಯಲ್ಪ ಸಂಬಳ ಹಾಗೂ ಸಹೋದರಿಯರು ಬೀಡಿ ಕಟ್ಟಿ ಬರುವ ಸಣ್ಣ ಮೊತ್ತದಿಂದ ಕಷ್ಟದಲ್ಲೇ ಜೀವನ ಸಾಗುತ್ತಿದೆ.
ಇವರ ಕೊನೆಯ ಸಹೋದರಿ 37 ವರ್ಷ ಪ್ರಾಯದ ಜಯಂತಿಯವರು ಕಳೆದ ಐದು ವರ್ಷಗಳಿಂದ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದಾರೆ. ಇತ್ತೀಚೆಗೆ ರೋಗ ಉಲ್ಬಣಿಸಿ ಎರಡು ವಾರಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ತಂಗಿಯ ಆರೋಗ್ಯ ಕಾಪಾಡುವುದರ ಜೊತೆಗೆ ಆಸ್ಪತ್ರೆಯ ಬಿಲ್ ಪಾವತಿಸುವುದೇ ಕೃಷ್ಣ ಕುಲಾಲ್ ಅವರಿಗೆ ದೊಡ್ಡ ತಲೆನೋವಾಗಿತ್ತು. ಇದೀಗೆ ವಾರಕ್ಕೆ ಎರಡು ಬಾರಿ ಡಯಾಲಿಸಿಸ್ ಮಾಡುವಂತೆ ವೈದ್ಯರು ಸೂಚಿಸಿದ್ದು ಈ ಬಡ ಕುಟುಂಬಕ್ಕೆ ಆರ್ಥಿಕ ಸಂಕಷ್ಟ ಎದುರಾಗಿದೆ. ಸಮಾಜದ ಬಂಧುಗಳು ಮಾನವೀಯ ನೆಲೆಯಲ್ಲಿ ತಮ್ಮಿಂದಾಗುವ ಧನ ಸಹಾಯವನ್ನು ಮಾಡಿದ್ದಲ್ಲಿ ತನ್ನ ತಂಗಿಗೆ ಡಯಾಲಿಸಿಸ್ ಮಾಡಿಸಿ ಮುಂದಿನ ಚಿಕಿತ್ಸೆ ಕೊಡಿಸಲು ಸಾಧ್ಯ ಎಂದು ಕೃಷ್ಣ ಕುಲಾಲ್ ಜನರಲ್ಲಿ ವಿನಂತಿಸಿಕೊಂಡಿದ್ದಾರೆ.
ಜಯಂತಿಯವರಿಗೆ ಆರ್ಥಿಕ ನೆರವು ನೀಡುವ ದಾನಿಗಳು ಅಥವಾ ಸಂಘ ಸಂಸ್ಥೆಗಳು
ಜಯಂತಿ
ಕೆನರ ಬ್ಯಾಂಕ್
ಬೋಳ್ಯಾರ್ ಶಾಖೆ
ಖಾತೆ ಸಂಖ್ಯೆ : 8802101000175
ಐಎಫ್ ಎಸ್ ಸಿ ಕೋಡ್:CNRB0008802 ಅಥವಾ ಗೂಗಲ್ ಪೇ: 8861892106
ಜಮಾ ಮಾಡುವಂತೆ ವಿನಂತಿ.
ಹೆಚ್ಚಿನ ಮಾಹಿತಿಗಾಗಿ ಕೃಷ್ಣ ಕುಲಾಲ್ ಅವರ ದೂರವಾಣಿ 9743787021 ಸಂಪರ್ಕಿಸವಂತೆ ಕೋರಲಾಗಿದೆ.

Related posts

Leave a Reply

Your email address will not be published. Required fields are marked *