Header Ads
Header Ads
Header Ads
Header Ads
Header Ads
Header Ads
Breaking News

ಕಿನ್ನಿಗೋಳಿಯಲ್ಲಿ ಬಸ್ಸಿಗೆ ಕಲ್ಲು ತೂರಾಟ ಪ್ರಕರಣ : ಮೂವರು ಆರೋಪಿಗಳ ಬಂಧನ

ಮುಲ್ಕಿ ಠಾಣಾ ವ್ಯಾಪ್ತಿಯ ಕಿನ್ನಿಗೋಳಿ ಹಾಗೂ ಕಟೀಲು ಪರಿಸರದಲ್ಲಿ ರಾತ್ರಿ ಹೊತ್ತು ನಿಲ್ಲಿಸಿದ್ದ ಒಟ್ಟು 5 ಬಸ್ಸುಗಳಿಗೆ ಕಳೆದ ಸೆ.4ರ ಮುಂಜಾನೆ ಕಲ್ಲು ತೂರಾಟ ನಡೆಸಿದ ಆರೋಪದಲ್ಲಿ ಮೂವರು ಆರೋಪಿಗಳನ್ನು ಮುಲ್ಕಿ ಹಾಗೂ ಬಜ್ಪೆ ಪೊಲೀಸ್ ರು ಜಂಟಿ ಕಾರ್ಯಾಚರಣೆ ಮೂಲಕ ಬಂದಿಸಿದ್ದಾರೆ. ಕಲ್ಲು ತೂರಾಟಕ್ಕೆ ಬಳಸಿದ್ದೆನ್ನಲಾದ ಕಾರನ್ನು ಪೊಲೀಸ್ ರು ವಶಪಡಿಸಿಕೊಂಡಿದ್ದಾರೆ.ಬಂಟ್ವಾಳ ತಾಲ್ಲೂಕಿನ ಬುಡೋಳಿ ಪೆರಾಜೆ ನಿವಾಸಿಗಳಾದ ಶಂಶೀರ್(27),ಅಬ್ದುಲ್ ಸತ್ತಾರ್(21)ನರಿಕೊಂಬು ನೆಹ್ರೂ ನಗರ ನಿವಾಸಿ ಮಹಮ್ಮದ್ ರಿಯಾಝ್(28) ಬಂಧಿತ ಆರೋಪಿಗಳು. ಸೆ.4ರಂದು ಮುಂಜಾನೆ ಕಿನ್ನಿಗೊಳಿ ಪೆಟ್ರೋಲು ಬಂಕ್ ಬಳಿ ನಿಲ್ಲಿಸಿದ್ದ ಮೂರು ಬಸ್ಸು ಕಿನ್ನಿಗೋಳಿ ಮೂಲ್ಕಿ ರಾಜ್ಯ ಹೆದ್ದಾರಿಯ ಬಟ್ಟಕೋಡಿ ಹಾಗೂ ಕಟೀಲು ಕಾಲೇಜು ಬಳಿ ನಿಲ್ಲಿಸಿದ್ದ ಬಸ್ಸುಗಳ ಗಾಜಿಗೆ ಕಲ್ಲೆಸೆದು ಹಾನಿಗೊಳಿಸಲಾಗಿತ್ತು.

ಮಂಗಳೂರು ಉತ್ತರ ಉಪ ವಿಬಾಗದ ಸಹಾಯಕ ಪೊಲೀಸ್ ಆಯುಕ್ತ ಶ್ರೀನಿವಾಸ ಗೌಡ ನೇತೃತ್ವದಲ್ಲಿ ಮುಲ್ಕಿ ಠಾಣಾ ನಿರೀಕ್ಷಕರಾದ ಅನಂತ ಪದ್ಮನಾ, ಪೊಲೀಸ್ ಉಪನಿರೀಕ್ಷಕ ಶೀತಲ್ ಅಲಗೂರು ಹಾಗೂ ಮುಲ್ಕಿ ಠಾಣಾ ಸಿಬ್ಬಂದಿ ಈ ಕಾರ್ಯಾಚರಣೆ ನಡೆಸಿದ್ದಾರೆ.

Related posts

Leave a Reply

Your email address will not be published. Required fields are marked *