Header Ads
Header Ads
Breaking News

ಕಿನ್ನಿಗೋಳಿಯ ಗುತ್ತಕಾಡಿನ ಮೂಕಾಂಬಿಕಾ ದೇವಳದಲ್ಲಿ ಕಳವು

ಕಿನ್ನಿಗೋಳಿಯ ಗುತ್ತಕಾಡಿನ ಮುಕಾಂಬಿಕಾ ದೇವಳದಲ್ಲಿ ಶನಿವಾರ ತಡರಾತ್ರಿ ಕಳವು ನಡೆದಿದೆ. ದೇವಸ್ಥಾನಕ್ಕೆ ಒಳನುಗ್ಗಿದ ಕಳ್ಳರು ನಗ-ನಗದು ಸೇರಿದಂತೆ ಅಪಾರ ಪ್ರಮಾಣದ ವಸ್ತುಗಳನ್ನು ಕಳವು ಮಾಡಿರುವುದಾಗಿ ತಿಳಿದು ಬಂದಿದೆ.

ಬೆಳ್ಳಿಯ ಪ್ರಭಾವಳಿ, ಮುಖವಾಡ, ನಗದು ಸೇರಿ ಸುಮಾರು 6 ಲಕ್ಷ ರೂ ಮೌಲ್ಯದ ವಸ್ತುಗಳನ್ನು ಕಳ್ಳರು ದೋಚಿ ಪರಾರಿಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮುಲ್ಕಿ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತನಿಖೆ ಮುಂದುವರಿಸಿದ್ದಾರೆ.
ವರದಿ: ನಿಶಾಂತ್ ಮುಲ್ಕಿ

Related posts

Leave a Reply