Breaking News

ಕಿನ್ನಿಗೋಳಿಯ ಗೊಳಿಜೊರಾ, ನೇಣು ಬಿಗಿದು ಯುವಕ ಆತ್ಮಹತ್ಯೆ

ಕಿನ್ನಿಗೋಳಿ ಸಮೀಪದ ಗೊಳಿಜೊರಾ ಎಂಬಲ್ಲಿ ಯುವಕನೊಬ್ಬ ಬಾವಿಯ ರಾಟೆಯ ಕಬ್ಬಿಣದ ರಾಡಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಮೃತ ಯುವಕನನ್ನು ಪ್ರತೀಕ್ ಎಂದು ಗುರುತಿಸಲಾಗಿದೆ. ಮೃತ ಯುವಕ ಪ್ರತೀಕ್ ಗುರುವಾರ ಬೆಳಗ್ಗೆ ೧೧ರ ಸುಮಾರಿಗೆ ಮನೆಯ ಸಮೀಪವಿರುವ ಗೋಳಿಜೋರಾ ಭಜನಾ ಮಂದಿರ ಎದುರಿನ ಬಾವಿಯ ಕಬ್ಬಿಣದ ಸರಳಿಗೆ ನೈಲಾನ್ ಹಗ್ಗ ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮಹಿಳೆಯೊಬ್ಬರು ಬಾವಿಯಿಂದ ಕುಡಿಯಲು ನೀರು ತೆಗೆಯಲು ಬಂದಾಗ ಬಾವಿಯ ಒಳಗಡೆ ಈತ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡದ್ದು ಕಂಡು ಬಂದಿದೆ. ಮುಲ್ಕಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Related posts

Leave a Reply