Header Ads
Header Ads
Header Ads
Breaking News

ಕಿನ್ಯಾ ಸರಕಾರಿ ಬಸ್ಸಿಗೆ ಹೈಕೋರ್ಟ್‌ನಿಂದ ತಡೆಯಾಜ್ಞೆ ಗ್ರಾಮಸ್ಥರಿಂದ ಪ್ರತಿಭಟನೆ

ಉಳ್ಳಾಲ: ಸರಕಾರಿ ಬಸ್ಸು ಬಂದ ಬಳಿಕ ಎಚೆತ್ತ ಖಾಸಗಿ ಬಸ್ಸು ಮಾಲೀಕರು ಬಸ್ಸುಗಳನ್ನು ರಜೆಯಿಲ್ಲದೆ ಓಡಿಸಲು ಆರಂಭಿಸಿದ್ದಾರೆ, ಈ ನಡುವೆ ಹೈಕೋರ್ಟ್‌ನಿಂದ ತಡೆಯಾಜ್ಞೆ ತರುವ ಮೂಲಕ ಬಹುಜನರ ಬೇಡಿಕೆಗೆ ಅನ್ಯಾಯ ಮಾಡಿದ್ದಾರೆ ಎಂದು ಡಿವೈ ಎಫ್ ಐ ಮುಖಂಡ ಹಂಝ ಕಿನ್ಯಾ ಆರೋಪಿಸಿದ್ದಾರೆ.

ಕಿನ್ಯಾ ಮತ್ತು ಬೋಳಿಯಾರು ಕಡೆಗೆ ತೆರಳುವ ಸರಕಾರಿ ಬಸ್ಸುಗಳಿಗೆ ಹೈಕೋರ್ಟ್ ತಡೆಯಾಜ್ಞೆ ತಂದಿರುವ ಖಾಸಗಿ ಬಸ್ ಮಾಲೀಕರ ವಿರುದ್ಧ ಕಿನ್ಯಾದಲ್ಲಿ ಗುರುವಾರ ಸಾರ್ವಜನಿಕರು ಖಾಸಗಿ ಬಸ್ ತಡೆದು ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.

ಕಿನ್ಯಾ ಭಾಗದ ಜನರ ಹಲವು ವರ್ಷಗಳ ಬೇಡಿಕೆಗಳಿಗೆ ಸ್ಪಂಧಿಸಿ ತಿಂಗಳ ಹಿಂದೆ ಸರಕಾರಿ ಬಸ್ ಸಂಚಾರ ಆರಂಭಿಸಿತ್ತು. ಅಷ್ಟರವರೆಗೆ ಜನರಿಗೆ ಅನುಕೂಲವಾಗದ ರೀತಿಯಲ್ಲಿ ಖಾಸಗಿ ಬಸ್ಸು ಸಂಚರಿಸದೆ ಬಸ್ ಮಾಲೀಕರಿಗೆ ಬೇಕಾದ ರೀತಿಯಲ್ಲಿ ಬೇಕಾಬಿಟ್ಟಿ ರಜೆ ಮಾಡುತ್ತಾ, ಮದುವೆ ಟ್ರಿಪ್ ಗಳ ಮಾಡುತ್ತಾ ಸಂಚರಿಸುತಿತ್ತು. ಸ್ಥಳೀಯ ಜನಪ್ರತಿನಿಧಿಗಳು ಬಸ್ಸು ಮಾಲೀಕರ ಜತೆಗೆ ಕೈಜೋಡಿಸಿ ಸರಕಾರಿ ಬಸ್ಸಿನ ಜತೆಜತೆಗೂ ಸರಕಾರಿ ಬಸ್ಸನ್ನು ಓಡಿಸುತ್ತಾ ಕಲೆಕ್ಷನ್ ಬಾರದಂತೆ ನಡೆಸುತ್ತಿದ್ದರು.

ಬೆಳಿಗ್ಗೆ 5 ಗಂಟೆಯಿಂದ ರಾತ್ರಿ 10 ಗಂಟೆವರೆಗೂ ಖಾಸಗಿ ಬಸ್ಸುಗಳಿಗೆ ಅನುಮತಿಯಿದ್ದರೂ ಅದರಂತೆ ಚಲಿಸದೆ ಪ್ರಯಾಣಿಕರು ಪರದಾಡುವಂತಾಗಿತ್ತು. ಇದೀಗ ತಿಂಗಳ ಹಿಂದೆ ಸರಕಾರಿ ಬಸ್ಸು ಬಂದ ನಂತರ ಸರಿಯಾಗಿ ಚಲಿಸುತ್ತಿದ್ದಾರೆ. ರಜೆಯಿಲ್ಲದೆ ಖಾಸಗಿ ಬಸ್ಸುಗಳು ಚಲಿಸುತ್ತಿವೆ. ಆದರೆ ಏಕಾ‌ಏಕಿ ತಡೆಯಾಜ್ಞೆ ತರುವ ಮೂಲಕ ಸರಕಾರಿ ಬುಧವಾರದಿಂದ ಗ್ರಾಮಕ್ಕೆ ಬಾರದಿರುವುದು ಮತ್ತೆ ಗ್ರಾಮಸ್ಥರಿಗೆ ತೊಂದರೆಯಾಗಿದೆ. ಶೀಘ್ರದಲ್ಲೇ ಬಸ್ಸು ಬರುವವರೆಗೆ ನ್ಯಾಯಾಲಯ ಮುಖೇನ ಹೋರಾಡುವುದಾಗಿ ತಿಳಿಸಿದರು.

ಕಿನ್ಯಾ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸಿರಾಜ್ ಕಿನ್ಯಾ ಮಾತನಾಡಿ ತಡೆಯಾಜ್ಞೆ ಕುರಿತು ಸಚಿವರಲ್ಲಿ ಮಾತನಾಡಿದ್ದು, ಗುರುವಾರ ಸಂಜೆ ಜಿಲ್ಲಾಧಿಕಾರಿ ಸಮ್ಮುಖದಲ್ಲಿ ವಿವಿಧ ಅಧಿಕಾರಿಗಳ ಜತೆಗೆ ತುರ್ತು ಸಭೆಯನ್ನು ಕರೆಂiiಲಾಗಿದೆ. ಇದರಲ್ಲಿ ಗ್ರಾಮಸ್ಥರನ್ನು ಭಾಗವಹಿಸಲು ಆಹ್ವಾನಿಸಲಾಗಿದೆ ಎಂದರು.  ಈ ವೇಳೆ ಸದಸ್ಯರಾದ ಫಾರೂಕ್ ಕಿನ್ಯಾ, ಹಮೀದ್ ಕಿನ್ಯಾ, ಡಿವೈ‌ಎಫ್‌ಐ ಹಂಝ ಕಿನ್ಯಾ ಮುಂತಾದವರು ಉಪಸ್ಥಿತರಿದ್ದರು.

Related posts

Leave a Reply