
ಕಿಯೋನಿಕ್ ಸಂಸ್ಥೆ ಸರ್ಕಾರ ಸ್ವಾಮ್ಯದ ಸಂಸ್ಥೆ. ಅದು ಸರ್ಕಾರದ ವಿವಿಧ ಇಲಾಖೆಗಳಿಗೆ ಮಾನವ ಸಂಪನ್ಮೂಲಗಳನ್ನು ಒದಗಿಸುವ ಒಂದು ಏಜೆನ್ಸಿ. ಸರ್ಕಾರ ಖಾಸಗೀಕರಣಕ್ಕೆ ಆದ್ಯತೆ ಕೊಡಬಾರದು, ಸರ್ಕಾರಿ ಸಂಸ್ಥೆಗಳನ್ನು ಬೆಳೆಸ್ಬೇಕು ಎನ್ನುವ ಸದಾಭಿಪ್ರಾಯ ಮತ್ತು ಸದುದ್ದೇಶವನ್ನು ಇಟ್ಟುಕೊಂಡಿದ್ರೆ ಕಿಯೋನಿಕ್ಸ್ಗೆ ಹೆಚ್ಚಿನ ಆದ್ಯತೆ ಕೊಡಬೇಕು ಎಂದು ಮಾಜಿ ಶಾಸಕ ವೈಎಸ್ವಿ ದತ್ತಾ ಹೇಳಿದ್ರು. ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಮೆಸ್ಕಾಂ ವ್ಯಾಪ್ತಿಯಲ್ಲಿ ಅನೇಕ ಜನ ಹೊರಗುತ್ತಿಗೆ ಕಾರ್ಮಿಕರು ಸೇವೆ ಸಲ್ಲಿಸುತ್ತಿದ್ದಾರೆ. ಅವ್ರೆಲ್ಲಾ ಪ್ರೆವೇಟ್ ಏಜೆನ್ಸಿಯವರ ಮೂಲಕ ಹಾಗೂ ಕಿಯೋನಿಕ್ಸ್ ಮೂಲಕವೂ ಬಂದಿದಾರೆ. ಪ್ರೈವೇಟ್ ಏಜೆನ್ಸಿಯವರು ಹೊರಗುತ್ತಿಗೆ ಕಾರ್ಮಿಕರನ್ನು ಒಂದು ರೀತಿಯಲ್ಲಿ ಶೋಷಿಸುತ್ತಿದ್ದಾರೆ ಎಂದು ಆರೋಪಿಸಿದ್ರು.