Header Ads
Header Ads
Breaking News

ಕಿರಣ್‌ಗೆ ಬೇಕಾಗಿದೆ ದಾನಿಗಳ ಸಹಾಯಹಸ್ತ

 ಕೂಲಿ ಕೆಲಸ ಮಾಡಿಕೊಂಡು, ಪತ್ನಿ ಹಾಗೂ ತನ್ನ ಎರಡು ಚಿಕ್ಕ ಮಕ್ಕಳೊಂದಿಗೆ ನೆಮ್ಮದಿಯಿಂದ ಬದುಕುತ್ತಿದ್ದ ಕಿರಣ ಫೂಜಾರಿಯವರ ಸ್ಥಿತಿ ಈಗ ಚಿಂತಾಜನಕವಾಗಿದೆ. ಒಂದು ರಸ್ತೆ ಅಪಘಾತ ಅವರನ್ನು ಕಷ್ಟದ ಕೂಪಕ್ಕೆ ತಳ್ಳಿದೆ.ಮಣೂರು ಸಮೀಪ ಬಾಳೆಬೆಟ್ಟಿನಲ್ಲಿ ಕಿರಣ್ ಪೂಜಾರಿಯವರಿಗೆ ಅಪಘಾತವಾಗಿ ತನ್ನ ಬೆನ್ನು ಮೂಳೆ ಮುರಿತಕ್ಕೊಳಗಾಗಿದ್ದಾರೆ. ಈಗಾಗಲೇ ಮಣಿಪಾಲದ ಆಸ್ಪತ್ರೆ ಯಲ್ಲಿ ಸುಮಾರು 4.5ಲಕ್ಷ ಕ್ಕೂ ಅಧಿಕ ಖರ್ಚು ಆಗಿದ್ದು ಇದೀಗ ಕಾಲಿನ ಮಂಡಿ ಆಪರೇಶನಿಗೆ 2ಲಕ್ಷ 40ಸಾವಿರ ಆಗಲಿದೆ ಎಂದು ಮಣಿಪಾಲದ ಆಸ್ಪತ್ರೆಯಲ್ಲಿ ತಿಳಿಸಿದ್ದಾರೆ. ಇವರಿಗೆ ಪ್ರತಿ ತಿಂಗಳು ಹಾಗೂ ಇತರ ವೈದ್ಯ ಕೀಯ ವೆಚ್ಚಗಳಿಗೆ10 ರಿಂದ 15ಸಾವಿರ ಹಣ ಖರ್ಚಾಗುತ್ತಿದೆ. ಇದಕ್ಕಾಗಿ ಸಾಕಷ್ಟು ವೆಚ್ಚ ಮಾಡಿ, ಸಾಲದಲ್ಲಿ ಸಿಲುಕಿಕೊಂಡಿರುವ ಕಿರಣ ಪೂಜಾರಿ ಅವರಿಗೆ ಸರಿಯಾದ ಒಂದು ಸೂರಿಲ್ಲ, ಮಕ್ಕಳ ವಿದ್ಯಾಭ್ಯಾಸಕ್ಕೂ ಹೊಂದಿಸಲು ಹಣ ಇಲ್ಲ ಸಾಲದ್ದಕ್ಕೆ ಇವರ ಪತ್ನಿಗೂ ಆರೋಗ್ಯದ ಸಮಸ್ಯೆ ಇದ್ದು ಇಂದು ಒಂದೊತ್ತಿನ ಊಟಕ್ಕೆ ಪಡಿತರ ಅಕ್ಕಿಯನ್ನೆ ಕಾಯಬೇಕಿದೆ. ಅವರು ಮುಂದಿನ ಚಿಕಿತ್ಸೆಗೆ ಹಣ ಹೊಂದಿಸಲು ಸಾಧ್ಯವಾಗದೆ ಪರದಾಡುತ್ತಿದ್ದಾರೆ. ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದ ಕಿರಣ್ ಪೂಜಾರಿಗೆ ಅಪಘಾತವಾದ ನಂತ್ರ ಇದೀ ಕುಟುಂಬ ಕಂಗಾಲಾಗಿದೆ. ಕುಟುಂಬದ ಹೊರೆಯನ್ನ ತನ್ನ ಹೆಗೆಲಿಗೆ ಏರಿಸಿಕೊಂಡಿದ್ದ ಕಿರಣ್ ಪೂಜಾರಿ ಅನಾರೋಗ್ಯದಿಂದ ಹಾಸಿಗೆ ಹಿಡಿಯಬೇಕಾಗಿದೆ.ದಾನಿಗಳ ಸಹಕಾರಕ್ಕೆ ಕುಟುಂಬ ಮೊರೆ ಹೋಗಿದೆ.

Account No.: 520101235272597

Name of the Account Holder: Kiran

Bank: Corporation bank,

NH 66, M G Road, Main Road, Manuru 576221

Bank IFSC Code: CORP0000178

Telephone No.: +91 9731049365

Related posts

Leave a Reply