Header Ads
Header Ads
Header Ads
Breaking News

ಕುಂಜತ್ತೂರಿನಲ್ಲಿ ಮಾದಕ ವಸ್ತುಗಳ ವಿರುದ್ಧ ರ್‍ಯಾಲಿ ಕುಂಬಳೆ ಸಿ‌ಐವಿವಿ ಮನೋಜ್‌ರಿಂದ ಚಾಲನೆ

ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಮಾದಕ ವಸ್ತಿಗಳ ಸೇವಣೆ ಹಾಗೂ ಮಾರಾಟಗಳ ವಿರುದ್ದ ಜನರಲ್ಲಿ ಜಾಗೃತಿ ಯನ್ನು ಮೂಡಿಸಲು ಕುಂಜತ್ತೂರು ಜಿವಿ‌ಎಚ್‌ಎಸ್‌ಎಸ್ ಶಾಲಾ ಸ್ಟೂಡೆಂಟ್ ಪೊಲೀಸ್ ಹಾಗೂ ವಿದ್ಯಾರ್ಥಿಗಳು ಮಾದಕ ವಸ್ತುಗಳ ವಿರುದ್ದ ಫಲಕಗಳನ್ನು ಹಿಡಿದು ಘೋಷಣೆಯೊಂದಿಗೆ ರ್‍ಯಾಲಿಯನ್ನು ನಡೆಸಿದರು.

ತೂಮಿನಾಡು ಜಂಕ್ಷನಿನಲ್ಲಿ ನಡೆದ ಕಾರ್ಯಕ್ರದಲ್ಲಿ ಕುಂಬಳೆ ಸಿ‌ಐವಿವಿ ಮನೋಜ್ ಜಾಥಾವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಇತ್ತೀಚಿನ ದಿನಗಳಲ್ಲಿ ಕೆಲವೊಂದು ಬಾಹ್ಯ ಶಕ್ತಿಗಳು ಶಾಲಾ ಪರಿಸರವನ್ನು ಕೇಂದ್ರೀಕರಿಸಿ ಮಾದಕ ವಸ್ತುಗಳನ್ನು ಮಾರಾಟ ನಡೆಸಿ ವಿದ್ಯಾರ್ಥಿಗಳನ್ನು ಬಲಿ ತೆಗೆದು ಕೊಳ್ಳುತಿದ್ದಾರೆ. ಯವುದೇ ಕ್ಷಣದಲ್ಲೂ ವಿದ್ಯಾರ್ಥಿಗಳು ಇಂತಹ ಚಟಕ್ಕೆ ಬಲಿಯಾಗಲೂ ಬಾರದು ಎಂದರು. ಈ ಸಂದರ್ಭ ಮಂಜೇಶ್ವರ ಠಣಾಧಿಕರಿ ಅನೂಪ್ ಕುಮಾರ್, ಶಾಲಾ ಅಧ್ಯಾಪಕರುಗಳಾದ ದಿನೇಶ್, ಅನಿತಾ ಸೇರಿದಂತೆ ಹಲವರು ಉಪಸ್ಥರಿದ್ದರು.

Related posts

Leave a Reply