Header Ads
Header Ads
Breaking News

ಕುಂಜತ್ತೂರಿನಲ್ಲಿ ಸಮಾಜ ಸೇವಕನ ಮನೆ ಕುಸಿತ : ಮನೆಯೊಳಗಿದ್ದ ವ್ಯಕ್ತಿ ಅದೃಷ್ಟವಶಾತ್ ಪಾರು

ಮಂಜೇಶ್ವರ: ಕುಂಜತ್ತೂರು ಮಾಸ್ಕೋ ಮದುವೆ ಸಭಾಂಗಣದ ಎದುರು ಭಾಗದಲ್ಲಿರುವ ರಾಷ್ಟ್ರೀಯ ಹೆದ್ದಾರಿಗೆ ತಾಗಿಕೊಂಡಿರುವ ಸುಮಾರು 53 ವರ್ಷಗಳ ಪುರಾತನವಿರುವ ಮನೆಯೊಂದು ಸೋಮವಾರ ಬೆಳಿಗ್ಗೆ ಕುಸಿದು ಬಿದ್ದಿದೆ.

ವೈದ್ಯಕೀಯ ಕ್ಷೇತ್ರದಲ್ಲಿ ಬಡ ಜನರ ಆಶಾಕಿರಣವಾಗಿರುವ ಅದೇ ರೀತಿ ಇತರ ಚಟುವಟಿಕೆಗಳಲ್ಲೂ ಸಮಾಜ ಸೇವಕನೆಂಬ ಬಿರುದನ್ನು ತನ್ನದಾಗಿಸಿರುವ ಅಕ್ಬರ್ ಎಂಬವರ ಕುಟುಂಬದ ಮನೆ ಕುಸಿದು ಬಿದ್ದಿದೆ. ಈ ಸಂದರ್ಭ ಅಕ್ಬರ್ ಮನೆಯೊಳಗಿದ್ದರೂ ಶಭ್ದ ಕೇಳಿ ಹೊರ ಓಡಿ ಬಂದುದರಿಂದ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಇವರು ಕಳೆದ ರಾತ್ರಿ ಕೂಟುಂಬವನ್ನು ಸಂಬಂಧಿಕರ ಮನೆಯಲ್ಲಿ ಬಿಟ್ಟು ಏಕಾಂತವಾಗಿ ಇದ್ದ ಕಾರಣ ಭಾರೀ ದುರಂತವೊಂದು ತಪ್ಪಿ ಹೋಗಿದೆ. ಸುಮಾರು53 ವರ್ಷಗಳಿಗೆ ಮುಂಚೆ ಇವರ ತಂದೆಯವರು ಕಟ್ಟಿಸಿದ ಮನೆಯಲ್ಲಿ ಇದೀಗ ಅಕ್ಬರ್ ಕುಟುಂಬ ಹಾಗೂ ಇವರ ಒಬ್ಬ ತಮ್ಮ ಮಾನಸಿಕ ಅಸ್ವಸ್ಥನಾಗಿ ಮೂಗನಾಗಿರುವ ರಫೀಕ್ ಎಂಬ ತಮ್ಮ ಈ ಮನೆಯಲ್ಲಿ ವಾಸಿಸುತಿದ್ದಾರೆ. ಕಳೆದ ೩೪ ವರ್ಷಗಳಿಂದ ಸಮಾಜ ಸೇವೆಯಲ್ಲೇ ನಿರತರಾಗಿರುವ ಅಕ್ಬರ್ ಸ್ವಂತಕ್ಕಾಗಿ ಏನನ್ನೂ ಮಾಡಿಟ್ಟವರಲ್ಲ. ಬಡವರ ಕಣ್ಣೀರನ್ನು ಒರೆಸುವುದರಲ್ಲಿ ಆನಂದವನ್ನು ಕಾಣುವ ಅಕ್ಬರ್ ಕುಟುಂಬಕ್ಕೆ ಇದೀಗ ಮನೆ ಕುಸಿತದಿಂದಾಗಿ ಅಪಾರ ನಷ್ಟ ಸಂಭವಿಸಿದೆ.

Related posts

Leave a Reply