Header Ads
Header Ads
Breaking News

ಕುಂಜತ್ತೂರು ಜಿ ವಿ ಎಚ್ ಎಸ್ ಎಸ್ ಶಾಲೆಯಲ್ಲಿ 2013-14 ನೇ ವರ್ಷದ ಪೂರ್ವ ವಿದ್ಯಾರ್ಥಿಗಳ ಅಪೂರ್ವ ಸಂಗಮ.

ಮಂಜೇಶ್ವರ: 2013-2014 ನೇ ವರ್ಷದ ಗುರು ಶಿಷ್ಯರ ಅಪೂರ್ವ ಸಂಗಮಕ್ಕೆ ಕುಂಜತ್ತೂರು ಜಿವಿಎಚ್‌ಎಸ್‌ಎಸ್ ಶಾಲೆಯಲ್ಲಿ ಸಾಕ್ಷಿಯಾಯಿತು. ವಿದ್ಯಾರ್ಥಿಗಳು ಶಾಲೆಯಲ್ಲಿ ಕಲಿಯುತ್ತಿರುವಾಗ ನಡೆದಂತಹ ಘಟನೆಗಳ ಬುತ್ತಿ ಬಿಚ್ಚಿಟ್ಟಾಗ ಎಲ್ಲರ ಮನಸ್ಸು ಬಾಲ್ಯದತ್ತ ಹೊರಳಿತು. ಅಧ್ಯಾಪಕರಿಗೆ ವಿದ್ಯಾರ್ಥಿಗಳ ಅಪೂರ್ವ ಸಂಗಮವನ್ನು ನೋಡಿ ಗುರುವಂದನೆಯನ್ನು ಸ್ವೀಕರಿಸಿ ಮಾತನಾಡುವಾಗ ಸಂತೋಷದಿಂದ ಮಾತೇ ಇಲ್ಲದಾಯಿತು.

ಕುಂಜತ್ತೂರು ಶಾಲೆಯ ಪೂರ್ವ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ರಹ್ಮಾನ್ ಉದ್ಯಾವರ ರವರ ಅಧ್ಯಕ್ಷತೆಯಲ್ಲಿ ಕುಂಜತ್ತೂರು ಶಾಲೆಯಲ್ಲಿ ನಡೆದ ಪೂರ್ವ ವಿದ್ಯಾರ್ಥಿ ಸಂಗಮವನ್ನು ಕಾಸರಗೋಡು ಜಿಲ್ಲಾ ಸ್ಥಾಯೀ ಸಮಿತಿ ಅಧ್ಯಕ್ಷ ಹರ್ಷಾದ್ ವರ್ಕಾಡಿ ಉದ್ಘಾಟಿಸಿದರು.ವೇದಿಕೆಯಲ್ಲಿ ಅಧ್ಯಾಪಕರುಗಳನ್ನು ವಿದ್ಯಾರ್ಥಿಗಳ ವತಿಯಿಂದ ಶಾಲು ಹೊದಿಸಿ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.
ಈ ಸಂದರ್ಭ ವೇದಿಕೆಯಲ್ಲಿ ಪೂರ್ವ ವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿ ದಯಾಕರ ಮಾಡ, ಶಾಲಾ ಮುಖ್ಯೋಪಧ್ಯಾಯ ಬಾಲಕೃಷ್ಣ ಜಿ, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಯೋಗೀಶ ಕೆ, ಹಿರಿಯ ಅಧ್ಯಾಪಕಿ ಪ್ರಮೀಳ ಕುಮಾರಿ ಟೀಚರ್, ನಿವೃತ ಅಧ್ಯಾಪಕಿ ಸರಸ್ವತಿ ಟೀಚರ್ ಮೊದಲಾದವರು ಉಪಸ್ಥರಿದ್ದರು.ಬಳಿಕ ಸಹ ಬೋಜನ ಕೂಟದಲ್ಲಿ ಅದ್ಯಾಪಕರು ಹಾಗೂ ವಿದ್ಯಾರ್ಥಿಗಳು ಜೊತೆಜೊತೆ ಭೋಜನ ಸ್ವೀಕರಿಸಿದರು.

Related posts

Leave a Reply