Header Ads
Header Ads
Breaking News

ಕುಂಜತ್ತೂರು ಪದವುನಲ್ಲು ಮನೆ ನುಗ್ಗಿ ಮಹಿಳೆಯ ಮಾನಭಂಗ ಯತ್ನ, ತಡೆಯಲು ಹೋದ ತಂದೆ, ಸಹೋದರನಿಗೂ ಹಲ್ಲೆ


ಮಂಜೇಶ್ವರ ಕುಂಜತ್ತೂರು ಪದವು ಎಂಬಲ್ಲಿ ಸುಮಾರು ಹತ್ತು ಮಂದಿಯ ತಂಡವೊಂದು ತಡ ರಾತ್ರಿ ಮನೆಗೆ ನುಗ್ಗಿ ಮಹಿಳೆಯ ಮಾನಭಂಗಕ್ಕೆ ಯತ್ನಿಸಿರುವ ಬಗ್ಗೆ ದೂರಲಾಗಿದೆ. ಇದನ್ನು ತಡೆಯಲು ಹೋದ ತಂದೆ ಹಾಗು ಸಹೋದರನಿಗೆ ಹಲ್ಲೆಗೈದು ಗಾಯಗೊಳಿಸಿದ್ದಾರೆ.
ಏಕಾ‌ಏಕಿ ಮನೆಗೆ ನುಗ್ಗಿದ ತಂಡ ಮಹಿಳೆಯ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಎಳೆದು ಅರ್ಧ ಮಹಿಳೆಯ ಕೈಯಲೂ ಅರ್ಧ ತಂಡದ ಕೈಯಲ್ಲೂ ಆಗಿರುವುದಾಗಿ ದೂರಲಾಗಿದೆ. ಮಹಿಳೆಯ ಮೈ ಮೇಲೆ ಕೈ ಹಾಕಿದ ತಂಡ ಬಳಿಕ ಬೊಬ್ಬೆ ಹಾಕುವಾಗ ಪರಾರಿಯಾಗಿದೆ. ಕುಂಜತ್ತೂರು ಪದವು ನಿವಾಸಿ ಇಬ್ರಾಹಿಂ ಎಂಬವರ ಮನೆಯಲ್ಲಿ ಈ ಕೃತ್ಯ ನಡೆದಿದೆ. ೬೫ರ ಇಬ್ರಾಹಿಂ ಇವರ ಪುತ್ರಿ ೩೮ರ ಝರೀನಾ, ೪೦ರ ಪುತ್ರ ನಿಝಾರ್ ತಂಡದಿಂದ ಹಲ್ಲೆಗೊಳಗಾಗಿದ್ದಾರೆ. ಬುದವಾರ ರಾತ್ರಿ ೧೨.೩೦ ರ ಸುಮಾರಿಗೆ ಆಗಮಿಸಿದ ೧೦ ಮಂದಿಯ ತಂಡ ಏಕಾ‌ಏಕಿ ಮನೆಗೆ ನುಗ್ಗಿ ಕಲ್ಲೆಸೆದು ಗಾಜುಗಳನ್ನು ಪುಡಿಗೈದಿದೆ. ಶಬ್ದ ಕೇಳಿ ಇಬ್ರಾಹಿಂ ಬಾಗಿಲು ತೆರೆದು ನೋಡುವಾಗ ಒಳನುಗ್ಗಿದ ತಂಡ ಸಮೀಪದಲ್ಲೇ ಇದ್ದ ಪುತ್ರಿ ಝರೀನಾಳ ಕೈಯನ್ನು ಹಿಡಿದು ಎಳೆದು ಶರೀರದ ಇತರ ಭಾಗಗಳಿಕೆ ಕೈಯಾಡಿಸಲು ಪ್ರಯತ್ನಿಸಿರುವುದಾಗಿ ದೂರಲಾಗಿದೆ.
ಈ ಸಂದರ್ಭ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಎಳೆದು ತಂಡ ತುಂಡರಿಸಿದೆ. ತಡೆಯಲು ಬಂದ ನಿಝಾರ್‌ನನ್ನು ತಂಡ ಹಲ್ಲೆಗೈದು ಗಾಯಗೊಳಿಸಿದೆ. ಸುಮಾರು ಒಂದೂವರೆ ವರ್ಷಕ್ಕೆ ಮೊದಲು ಇಬ್ರಾಹಿಂ ಎಂಬವರು ಪದವು ಮಸೀದಿ ಆಡಳಿತ ಸಮಿತಿಯ ಅಧ್ಯಕ್ಷರಾಗಿದ್ದಾಗ ಪ್ರಕರಣವೊಂದು ದಾಖಲಾಗಿದ್ದು, ಅದು ಇತ್ಯರ್ಥವಾಗದೆ ಮುಂದುವರಿದಿದೆ. ಈ ಪ್ರಕರಣವನ್ನು ಕೂಡಲೇ ಹಿಂತೆಗೆಯಬೇಕು ಅದೇ ರೀತಿ ನಷ್ಟ ಪರಿಹಾರವಾಗಿ ೩೦ ಸಾವಿರ ರೂ. ನೀಡಬೇಕೆಂಬುದಾಗಿ ತಂಡ ಬೇಡಿಕೆ ಇಟ್ಟಿದೆ ಎನ್ನಲಾಗಿದೆ. ಗಾಯಾಳುಗಳು ಕಾಸರಗೋಡು ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ. ಮಂಜೇಶ್ವರ ಪೊಲೀಸರಿಗೆ ದೂರು ನೀಡಲಾಗಿದೆ.

Related posts

Leave a Reply