Header Ads
Header Ads
Breaking News

ಕುಂಜತ್ತೂರು ಪ್ರೌಢಶಾಲೆಯ ವಿದ್ಯಾರ್ಥಿಯ ಸಾಧನೆ : ಸಾಫ್ಟ್‍ಬಾಲ್ ಪಂದ್ಯಾಟದಲ್ಲಿ ಫರ್ಝಾನ ರಾಷ್ಟ್ರಮಟ್ಟಕ್ಕೆ ಆಯ್ಕೆ

ಸಾಫ್ಟ್‍ಬಾಲ್ ಪಂದ್ಯಾಟದಲ್ಲಿ ಕುಂಜತ್ತೂರಿನ ಜಿವಿಎಚ್‍ಎಸ್‍ಎಸ್ ಶಾಲೆಯ ವಿದ್ಯಾರ್ಥಿನಿ ಫರ್ಝಾನ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಕಾಸರಗೋಡು ಜಿಲ್ಲೆಯಿಂದ ಸ್ಪರ್ಧಾಕಣದಲ್ಲಿದ್ದ 18 ಮಂದಿ ವಿದ್ಯಾರ್ಥಿಗಳ ಪೈಕಿ ಏಕೈಕ ವಿದ್ಯಾರ್ಥಿನಿ ಮಾತ್ರ ಜಿಲ್ಲೆಯ ಅಭಿಮಾನದ ತಾರೆಯಾಗಿದ್ದಾಳೆ.

ಮಂಜೇಶ್ವರ ತಳೇಕಲ ಪಾವೂರು ನಿವಾಸಿಯಾದ ಭಿನ್ನ ಚೇತನರಾಗಿರುವ ಕಜೆ ಸಾಹೇಬ್ ಎಂಬವರ ಪುತ್ರಿಯಾಗಿದ್ದಾಳೆ ಫರ್ಝಾನ. ಈಕೆ ಮೊದಲು ಜಿಲ್ಲಾಮಟ್ಟದಿಂದ ರಾಜ್ಯಮಟ್ಟಕ್ಕೆ ಆಯ್ಕೆಯಾಗಿ ಬಳಿಕ ರಾಜ್ಯಮಟ್ಟದಲ್ಲೂ ವಿಜಯದ ಗುರಿಯನ್ನು ತಲುಪಿ ಇದೀಗ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾಳೆ.

ಜನವರಿ 24ರಂದು ಕೇರಳದ ಪತ್ರಣಂ ತಿಟ್ಟದಲ್ಲಿ ತರಬೇತಿಯಲ್ಲಿ ಪಾಲ್ಗೊಳ್ಳಲಿದ್ದು, ಫೆಬ್ರವರಿ 8ರಂದು ರಾಷ್ಟ್ರಮಟ್ಟದ ಪಂದ್ಯಾಟಕ್ಕೆ ಪಂಜಾಬ್‍ಗೆ ತೆರಳಲಿದ್ದಾರೆ. ಈ ನಿಟ್ಟಿನಲ್ಲಿ ಕುಂಜತ್ತೂರು ಪ್ರೌಢ ಶಾಲೆಗೆ ಅಗಮಿಸಿದ ಫರ್ಝಾನಳನ್ನು ಅಧ್ಯಾಪಕರು, ವಿದ್ಯಾರ್ಥಿಗಳು ಹಾಗೂ ಹಳೆ ವಿದ್ಯಾರ್ಥಿಗಳು ಸ್ವಾಗತಿಸಿ ಅಭಿನಂದಿಸಲಾಯಿತು.

Related posts

Leave a Reply