Header Ads
Header Ads
Breaking News

ಕುಂಜತ್ತೂರು: ಪ್ಲೈವುಡ್ ಕಾರ್ಖಾನೆಯಲ್ಲಿ ಆಯಿಲ್ ಬಾಯ್ಲರ್ ಸ್ಪೋಟ

ಮಂಜೇಶ್ವರ: ಕುಂಜತ್ತೂರಿನ ಪದವು ಎಂಬಲ್ಲಿ ಕಾರ್ಯಚರಿಸುತ್ತಿದ್ದ ಫ್ಲೈ ವುಡ್ ಕಾರ್ಖಾನೆಯೊಂದರಲ್ಲಿ ಓಯಿಲ್ ಬಾಯ್ಲರ್ ಸ್ಪೋಟಗೊಂಡು ಇಬ್ಬರು ಗಾಯಗೊಂಡಿದ್ದಾರೆ. ಈ ಪೈಕಿ ಒಬ್ಬರ ಸ್ಥಿತಿ ಗಂಭೀರವಾಗಿರುವುದಾಗಿ ತಿಳಿದು ಬಂದಿದೆ. ಉದ್ಯಾವರ ನಿವಾಸಿ ಆದಂಕುಂಞಿ ಎಂಬವರ ಪುತ್ರ ಖಲೀಲ್ ಗಂಭೀರ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಇನ್ನೊಬ್ಬ ಅಸಾಂ ನಿವಾಸಿ ಗಾಯಗೊಂಡದ್ದು ಈತನನ್ನು ಕೂಡಾ ಆಸ್ಪತ್ರೆಗೆ ದಾಖಲಿಸಲಾಗಿದೆ.ಈ ಕಂಪನಿಯಲ್ಲಿ ಸುಮಾರು 200ರಷ್ಟು ಮಂದಿ ಕಾರ್ಮಿಕರು ಕೆಲಸ ನಿರ್ವಹಿಸುತಿದ್ದು, ಇವರೆಲ್ಲರೂ ಉಟಕ್ಕೆ ತೆರಳಿದ ಸಂದರ್ಭ ಸ್ಪೋಟ ಸಂಭವಿಸಿದೆ. ಇದರಿಂದಾಗಿ ಭರೀ ಒಂದು ದುರಂತ ತಪ್ಪಿ ಹೋಗಿದೆ. ಸ್ಪೋಟಗೊಂಡ ಬಾಯ್ಲರ್ ನ ಅಲ್ಪ ದೂರದ ಕಚೇರಿಯಲ್ಲಿ ಕೆಲಸ ನಿರ್ವಹಿಸುತಿದ್ದ ಖಲೀಲ್ ಹಾಗೂ ಅದೇ ಪರಿಸರದಲ್ಲಿದ್ದ ಅಸ್ಸಾಂ ನಿವಾಸಿ ಗಾಯಗೊಂಡಿದ್ದಾರೆ.

Related posts

Leave a Reply