
ಮಂಜೇಶ್ವರದ ಕುಂಜತ್ತೂರು ಹೈಯರ್ ಸೆಕಂಡರಿ ಶಾಲೆಯಲ್ಲಿ ಎರಡು ದಿವಸಗಳ ವಿಜ್ಞಾನೋತ್ಸವಕ್ಕೆ ಚಾಲನೆ ದೊರಕಿತು. ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಯು.ಎಚ್ ಅಬ್ದುಲ್ ರಹ್ಮಾನ್ ರವರ ಅಧ್ಯಕ್ಷತೆಯಲ್ಲಿ ಜರಗಿದ ವಿಜ್ಞಾನೋತ್ಸವವನ್ನು ಮಂಜೇಶ್ವರ ಗ್ರಾಮ ಪಂಚಾಯತ್ ಅಧ್ಯಕ್ಷ ಅಬ್ದುಲ್ ಅಝೀಝ್ ಹಾಜಿಯವರು ವಿಜ್ಞಾನೋತ್ಸವಕ್ಕೆ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು ವಿದ್ಯಾರ್ಥಿಗಳ ಪ್ರತಿಭೆಗಳನ್ನು ಪ್ರದರ್ಶಸಲು ಹಾಗೂ ಕಲಿಕೆಯಲ್ಲಿ ಉತ್ಸಾಹ ಮೂಡಿ ಬರಲು ಆಯೋಜಿಸಲಾಗುತ್ತಿರುವ ವಿಜ್ಞಾನೋತ್ಸವದ ರೀತಿಯ ಕಾರ್ಯಕ್ರಮಗಳಲ್ಲಿ ಅತೀ ಹೆಚ್ಚಿನ ವಿದ್ಯಾರ್ಥಿಗಳು ಭಾಗವಹಿಸಬೇಕಾಗಿದೆ ಎಂದು ಹೇಳಿದರು. ಈ ಸಂದರ್ಭ ಅಬ್ದುಲ್ ಖಾದರ್, ಪ್ರಸನ್ನ ಕುಮಾರಿ ಟೀಚರ್, ಶಿಶುಪಾಲನ್, ಸೇರಿದಂತೆ ಹಲವರು ಉಪಸ್ಥರಿದ್ದರು.