Header Ads
Header Ads
Breaking News

ಕುಂಜತ್ತೂರು ಶಾಲೆಯಲ್ಲಿ ಸ್ಕೂಲ್ ಪ್ರೊಟೆಕ್ಷನ್ ಗ್ರೂಪ್ ಮೀಟ್

ಮಂಜೇಶ್ವರ: ಓ ಆರ್ ಸಿ ಪ್ರಾಯೋಜಕತ್ವದಲ್ಲಿ ಸರಕಾರದ ನಿರ್ದೇಶದಂತೆ ಕುಂಜತ್ತೂರು ಹೈಯರ್ ಸೆಕಂಡರಿ ಶಾಲೆಯಲ್ಲಿ ಸ್ಕೂಲ್ ಪ್ರೊಟೆಕ್ಷನ್ ಗ್ರೂಪ್ ಮೀಟ್ ನಡೆಯಿತು.ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಯೋಗೀಶ್‍ರವರ ಅಧ್ಯಕ್ಷತೆಯಲ್ಲಿ ನಡೆದ ಗ್ರೂಪ್ ಮೀಟನ್ನು ಮಂಜೇಶ್ವರ ಅಡಿಷನಲ್ ಎಸ್ಸೈ ಅನೀಸ್ ಉದ್ಘಾಟಿಸಿ ಮಾತನಾಡಿದ ಅವರು, ಸರಕಾರಿ ಶಾಲೆಗಳ ಭದ್ರತೆಯನ್ನು ಕಾಪಾಡಲು ಸರಕಾರದ ಪ್ರತ್ಯೇಕ ನಿರ್ದೆಶನವಿದೆ. ಈ ನಿಟ್ಟಿಬಲ್ಲಿ ಸೇರಿದ ಎಲ್ಲಾ ಇಲಾಖೆಯ ಹಾಗೂ ಸಂಘಟನೆಯ ಮತ್ತು ಊರವರ ಸಹಕಾರ ಈ ಶಾಲೆಗೆ ಅತೀ ಅಗತ್ಯವಾಗಿದೆ. ಎಂದು ಹೇಳಿದರು.ಶಾಲೆಯನ್ನು ಸಮಾಜಘಾತ ಶಕ್ತಿಗಳಿಂದ ರಕ್ಷಿಸುವುದು, ವಿದ್ಯಾರ್ಥಿಗಳು ಮಾದಕ ದ್ರವ್ಯ ಪದಾರ್ಥಗಳಿಗೆ ಬಲಿಯಾಗದಂತೆ ಎಚ್ಚರ ವಹಿಸುವುದು, ಶಾಲೆಗೆ ಆಗಮಿಸುತ್ತಿರುವ ವಿದ್ಯಾರ್ಧಿಗಳಿಗೆ ರಾ. ಹೆದ್ದಾರಿಯಲ್ಲಿ ವಾಹನಗಳ ಸಂಚಾರವನ್ನು ನಿಯಂತ್ರಿಸುವುದು, ಶಾಲೆಯಿಂದ ಹೊರ ಹೋಗುತ್ತಿರುವ ವಿದ್ಯಾರ್ಥಿಗಳನ್ನು ಮನಒಲಿಸಿ ಮತ್ತೆ ಶಾಲೆಯತ್ತ ಕರೆ ತರುವುದು ಮೊದಲಾದ ರೀತಿಯ ಚಟುವಟಿಕೆಗಳಲ್ಲಿ ಸಕ್ರಿಯರಾಗಲು ಶಾಲಾ ಸಂರಕ್ಷಣಾ ಗ್ರೂಪ್ ಸಕ್ರಿಯವಾಗಲು ನಿರ್ಧೇಶನ ನೀಡಲಾಯಿತು.ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ, ಮಂಜೇಶ್ವರ ಠಾಣಾಧಿಕಾರಿ ಯವರ ಮುಂದಾಳತ್ವದಲ್ಲಿ ಹೊಸ ಸಮಿತಿಯನ್ನು ಆಯ್ಕೆ ಮಾಡಲಾಯಿತು. ವೇದಿಕೆಯಲ್ಲಿ ಕಳೆದ ಹಲವಾರು ವರ್ಷಗಳಿಂದ ರಕ್ಷಕ ಶಿಕ್ಷಕ ಸಂಘದಲ್ಲಿ ಪದಾಧಿಕಾರಿಯಾಗಿ ಶಾಲೆಯ ಸರ್ವತೋಮುಖ ಏಳಿಗಾಗಿ ಶ್ರಮಿಸಿದ ಸಮಾಜ ಸೇವಕ ಹಾಗೂ ರಾಜಕೀಯ ಮುಂದಾಳು ಕೆ ಎಂ ಅಬ್ದುಲ್ ಖಾದರ್ ರವರನ್ನು ಸನ್ಮಾನಿಸಲಾಯಿತು.ಶಾಲಾ ಮುಖ್ಯೋಪಾಧ್ಯಯರು, ಶಿಕ್ಷಕರು ವಿವಿಧ ಇಲಾಖೆಯ ಅಧಿಕಾರಿಗಳು ಊರವರು ಪಾಲ್ಗೊಂಡರು.

Related posts

Leave a Reply