Header Ads
Header Ads
Breaking News

ಕುಂಜತ್ತೂರು ಸಾಹಿತ್ಯಕೂಟದ ಪ್ರಾಯೋಕತ್ವದಲ್ಲಿ ವೈವಿಧ್ಯ ಸಾಹಿತ್ಯ ಕೂಟದ ಸದಸ್ಯರಿಂದ ಭಾವಗಾನ, ಜನಪದ ಗೀತೆಗಳು

ಮಂಜೇಶ್ವರ: ಕುಂಜತ್ತೂರು ಸಾಹಿತ್ಯ ಕೂಟದ ಪ್ರಾಯೋಜಕತ್ವದಲ್ಲಿ ಕಾರ್ಯಕ್ರಮ ವೈವಿಧ್ಯ ವಿಜೃಂಭಣೆಯಿಂದ ನಡೆಯಿತು. ವಿವಿಧ ಮನೋರಂಜನಾ ಕಾರ್ಯಕ್ರಮ ನೆರೆದವರನ್ನು ರಂಜಿಸಿತು.ರಾಷ್ಟ್ರಕವಿ ಗೋವಿಂದ ಪೈ ಸ್ಮಾರಕ ಟ್ರಸ್ಟ್ ಮಂಜೇಶ್ವರ ಹಾಗೂ ಸಾಹಿತ್ಯ ಕೂಟ ಕುಂಜತ್ತೂರು ಇದರ ಸಹಭಾಗಿತ್ವದಲ್ಲಿ ಪಾರ್ತಿಸುಬ್ಬ ವೇದಿಕೆ ಗಿಳಿವಿಂಡು ಆವರಣದಲ್ಲಿ ಕಾರ್ಯ ಕ್ರಮ ವೈವಿಧ್ಯ ನಡೆಯಿತು. ಸಾಹಿತ್ಯ ಕೂಟದ ಸದಸ್ಯರ ಪ್ರಾರ್ಥನೆಯ ಬಳಿಕ ನಿವೃತ್ತ ಜಿಲ್ಲಾ ತಹಶೀಲ್ದಾರರಾದ ಕೆ ಪಿ ಸೋಮಶೇಖರ್ ರವರ ಅಧ್ಯಕ್ಷತೆಯಲ್ಲಿ ವಿವಿಧ ಮನ ರಂಜನಾ ಕಾರ್ಯಕ್ರಮ ನಡೆಯಿತು.ಸಭಾ ಕಾರ್ಯಕ್ರಮದ ಬಳಿಕ ಸಾಹಿತ್ಯ ಕೂಟದ ಸದಸ್ಯರಿಂದ ಭಾವಗಾನ, ಜನಪದ ಗೀತೆಗಳು, ನೃತ್ಯಾಭಿನಯ. ಸ್ವರಚಿತ ಕವನ ಪ್ರಸ್ಥುತಿ ಸೇರಿದಂತೆ ಹಲವು ಮನ ರಂಜನಾ ಕಾರ್ಯಕ್ರಮಗಳು ನಡೆದವು.

Related posts

Leave a Reply