Header Ads
Header Ads
Header Ads
Breaking News

ಕುಂಜತ್ತೂರು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಪಾರ್ಲಿಮೆಂಟ್ ಚುನಾವಣೆ ಸ್ಪರ್ಧಿಸಿದ 10 ವಿದ್ಯಾರ್ಥಿಗಳ ಪೈಕಿ ಅರು ಮಂದಿ ಜಯಭೇರಿ

ಕುಂಜತ್ತೂರು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳನ್ನು ಸಕ್ರಿಯವಾಗಿ ತೊಡಗಿಸಲು ಸಂಸತ್ ಚುನಾವಣೆ ನಡೆಸಲಾಯಿತು. ವಿದ್ಯಾರ್ಥಿಗಳ ಕಲಿಕೆ ಪರಿಣಾಮಕಾರಿಯಾಗಿಸಲು ಚುನಾವಣಾ ಆಯೋಗ ರೂಪಿಸುವ ನೀತಿ ನಿಯಮಾವಳಿಗಳನ್ನು ಚುನಾವಣೆಗೆ ನಡೆಸಲಾಯಿತು. ಚುನಾವಣೆಯಲ್ಲಿ 10 ವಿದ್ಯಾರ್ಥಿಗಳು ಸ್ಪರ್ಧಿಸಿದ್ದರು. ಅದರಲ್ಲಿ 6 ವಿದ್ಯಾರ್ಥಿಗಳು ಗೆಲವು ಸಾಧಿಸಿ ವಿವಿಧ ಸ್ಥಾನಗಳಲ್ಲಿ ಪಡೆದುಕೊಂಡರು.2017- 18ನೇ ಶೈಕ್ಷಣಿಕ ವರ್ಷದ ಶಾಲಾ ಚುನಾವಣೆ ಕುಂಜತ್ತೂರು ಹೈಯರ್ ಸೆಕಂಡರಿ ಶಾಲೆಯಲ್ಲಿ ಶಾಲಾ ಪಾರ್ಲಿಮೆಂಟ್ ಚುನಾವಣೆ ಬಹಳ ವ್ಯವಸ್ಥಿತವಾಗಿ ಜರಗಿತು.

ಮುಖ್ಯ ಚುನಾವಣಾಧಿಕರಿಗಳ ನೇತೃತ್ವದಲ್ಲಿ ಶಾಲಾ ಪೊಲೀಸ್ ಕೆಡೆಟ್ ಗಳ ಪೋಸ್ಟಲ್ ಮತದಾನ ನಡೆದ ಬಳಿಕ ಸ್ಟೂಡೆಂಟ್ ಪೊಲೀಸ್ ಕೆಡೆಟ್ ಗಳ ಬೆಂಗಾವಲಿನೊಂದಿಗೆ ತರಗತಿಗಳಲ್ಲಿ ಶಿಕ್ಷಕರು ಚುನಾವಣೆಯನ್ನು ನಡೆಸಿದರು. ಚುನಾವಣಾ ವೀಕ್ಷ ಕರಾಗಿ ಅಮಿತ ಟೀಚರ್ ಹಾಗೂ ಕನಕಮ್ಮ ಟೀಚರ್ ಕರ್ತವ್ಯ ನಿರ್ವಹಿಸಿದ್ದರು.ಚುನಾವಣೆ ಕರ್ತವ್ಯದಲ್ಲಿ ಮುಖ್ಯಶಿಕ್ಷಕ ಅಗಸ್ಟಿನ್ ಬರ್ನಾಡ್, ಸಹ ಶಿಕ್ಷ ಕರಾದ ಪ್ರಸನ್ನ ಟೀಚರ್ ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.

Related posts

Leave a Reply