Header Ads
Breaking News

ಕುಂಜತ್ತೂರು ಹೈಯರ್ ಸೆಕಂಡರಿ ಶಾಲೆ ವಿದ್ಯಾರ್ಥಿಗಳಿಂದ ರಸ್ತೆ ಸುರಕ್ಷತಾ ಅವಾರ್ನೆಸ್

ಮಂಜೇಶ್ವರ: ಸ್ತ್ರೀಗಳ ಹಾಗೂ ಮಕ್ಕಳ ಸುರಕ್ಷೆಯ ಹಾಗೂ ಸ್ತ್ರೀ ಶಕ್ತೀಕರಣದ ಭಾಗವಾಗಿ ಕೇರಳದಲ್ಲಿ ಹಮ್ಮಿಕೊಳ್ಳಲಾಗಿರುವ ಯೋಜನೆಯ ಭಾಗವಾಗಿ ಕುಂಜತ್ತೂರು ಹೈಯರ್ ಸೆಕಂಡರಿ ಶಾಲಾ ಸ್ಟೂಡೆಂಟ್ ಪೊಲೀಸ್ ವಿದ್ಯಾರ್ಥಿನಿಗಳಿಂದ ರಸ್ತೆ ಸುರಕ್ಷ ಅವಾರ್ನೆಸ್ ನಡೆಯಿತು.

ತೂಮಿನಾಡು, ಕುಂಜತ್ತೂರು ಹಾಗೂ ಹೊಸಂಗಡಿ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಕಾರ್ಯಪ್ರವ್ರತರಾದ ವಿದ್ಯಾರ್ಥಿನಿಗಳು ಆ ದಾರಿಯಾಗಿ ಹೆಲ್ಮೇಟ್ ಧರಿಸದೇ ಆಗಮಿಸಿದ ಬೈಕ್ ಹಾಗೂ ಸ್ಕೂಟರ್ ಸವಾರರನ್ನು ನಿಲ್ಲಿಸಿ ಹೆಲ್ಮೇಟ್ ಧರಿಸದೇ ಇದ್ದರೆ ಸಂಭವಿಸಬಹುದಾದ ಅನಾಹುತದ ಬಗ್ಗೆ ಮನವರಿಕೆ ಮಾಡುವುದರ ಜೊತೆಯಾಗಿ, ಕಾನೂನು ಉಲ್ಲಂಘಿಸಿದರೆ ಯಾವ ರೀತಿಯ ದಂಡ ವಿಧಿಸಲಾಗುತ್ತದೆ ಎಂಬುದರ ಬಗ್ಗೆಯೂ ಮನವರಿಕೆ ಮಾಡಿಕೊಟ್ಟರು. ವಿದ್ಯಾರ್ಥಿನಿಗಳಾದ ಶಾನಿಯಾ ಹನಾನ, ಅಸ್ರೀನ, ಲಕ್ಷ್ಮಿ, ಹಾಗೂ ಫರ್ಜಾನ ಮೊದಲಾದವರು ರಸ್ತಾ ಸುರಕ್ಷ ಅವಾರ್ನೆಸ್ ನಡೆಸಿದರು. ಮಂಜೇಶ್ವರ ಪೊಲೀಸ್ ಠಾಣೆಯ ಸಿಬ್ಬಂದಿಗಳಾದ ಅಜಯ, ಉತ್ತೇಶ್, ಸಿಪಿಒ ಉಮೆಶ್ ಮೊದಲಾದವರು ನೇತೃತ್ವ ವಹಿಸಿದ್ದರು.

Related posts

Leave a Reply

Your email address will not be published. Required fields are marked *