Header Ads
Header Ads
Breaking News

ಕುಂಡಡ್ಕ ಶ್ರೀ ವಿಷ್ಣಮೂರ್ತಿ ದೇವಸ್ಥಾನ, ಮಾಡ ಶಿಬರಿಕಲ್ಲ ಶ್ರೀ ಮಲರಾಯ – ಮೂವದೈವಂಗಳ ದೈವಸ್ಥಾನ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಅಂಗವಾಗಿ ಧರ್ಮಸಭೆ ಹಾಗೂ ಸನ್ಮಾನ ಕಾರ್ಯಕ್ರಮ

 

ಧಾರ್ಮಿಕ ಉಪನ್ಯಾಸ ನೀಡಿದ ಬಾರ್ಕೂರು ಭಾರ್ಗವ ಬೀಡು ಬಾರ್ಕೂರು ಮಹಾಸಂಸ್ಥಾನದ ವಿದ್ಯಾವಾಚಸ್ಪತಿ ಡಾ.ವಿಶ್ವ ಸಂತೋಷ ಭಾರತಿ ಶ್ರೀಪಾದರು ಮಾತನಾಡಿ ದೇವರಲ್ಲಿ ಪ್ರೀತಿ ಇಟ್ಟಾಗ ಮಾತ್ರ ಆತ ಒಲಿಯುತ್ತಾನೆ. ಶ್ರದ್ಧಾ ಕೇಂದ್ರಗಳಲ್ಲಿ ಸೇವೆ ಮೂಲಕ ದೇವರಿಗೆ ಹತ್ತಿರ ಆಗಬೇಕು. ಹಿಂದುಗಳಲ್ಲಿ ಗಟ್ಟಿತನದ ಸಂಘಟನೆ ಇದ್ದಾಗ ಯಾವ ರೀತಿಯ ಮತಾಂತರಗಳಾಗಲು ಸಾಧ್ಯವಿಲ್ಲ ಹೇಳಿದರು.

ವರ್ಕಳ ಶಿವಗಿರಿ ಮಠದ ಶ್ರೀ ಸತ್ಯಾನಂದ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿ ಮುಗ್ಧತೆ ನಿಸ್ವಾರ್ಥ ಸೇವೆ ಇದ್ದಲ್ಲಿಭಗವಂತನ ಅನುಗ್ರಹವಿರುತ್ತದೆ. ನಮ್ಮೊಳಗಿನ ಪರಮಾತ್ಮನ ಜಾಗೃತಿಯಾಗಲು ದೇವಾಲಯಗಳು ಅಗತ್ಯ. ದೇವಾಲಯದಲ್ಲಿ ಧಾರ್ಮಿಕ ಚಟುವಟಿಕೆಗಳು ನಿರಂತರವಾಗಿ ನಡೆದಾಗ ಶಕ್ತಿವೃದ್ಧಿಯಾಗುತ್ತದೆ ಎಂದು ತಿಳಿಸಿದರು.

ಶ್ರೀ ಕ್ಷೇತ್ರ ಕಟೀಲಿನ ಅನುವಂಶಿಕ ಅರ್ಚಕರಾದ ಶ್ರೀ ಕೆ. ಅನಂತ ಪದ್ಮನಾಭ ಅಸ್ರಣ್ಣರು ಆಶೀರ್ವಚನ ನೀಡಿ ದೇವರಿಗೆ ಭಕ್ತಿ ಮುಖ್ಯವಾಗಿದೆ. ಶುದ್ಧವಾದ ಮನಸ್ಸು ಇದ್ದಾಗ ದೇವರು ಒಲಿಯುತ್ತಾನೆ ಎಂದರು.

ಸೈನ್ಯದಲ್ಲಿಸೇವೆ ಸಲ್ಲಿಸಿದ ದಯಾನಂದಗೌಡ, ಕೊರಗಪ್ಪ ಶೆಟ್ಟಿ ಜೇಡರಕೋಡಿ, ಬೋಳಿಗದ್ದೆ ಕೂಸಪ್ಪ ಶೆಟ್ಟಿ, ಕ್ರೀಡಾ ಕ್ಷೇತ್ರದ ಸೇವೆಗೆ ದೀಕ್ಷಿತಾ ಶೆಟ್ಟಿ ಅಬಿರಿ ಅವರನ್ನು ಸನ್ಮಾನಿಸಲಾಯಿತು. ಅಧ್ಯಕ್ಷತೆಯನ್ನು ಬಂಗಾಡಿ ಅರಮನೆಯ ರವಿರಾಜ ಬಲ್ಲಾಳರು ವಹಿಸಿದ್ದರು.

ಶ್ರೀ ಕ್ಷೇತ್ರ ಹನುಮಗಿರಿಯ ಆಡಳಿತ ಧರ್ಮದರ್ಶಿ ನನ್ಯ ಅಚ್ಚುತ ಮೂಡೆತ್ತಾಯ, ಲಕುಮಿ ತಂಡದ ಕಿಶೋರ್ಡಿ.ಶೆಟ್ಟಿ, ಸುಬ್ರಾಯ ಪೈ ವಿಟ್ಲ,ಯುವವಾಹಿನಿ ಕೇಂದ್ರ ಘಟಕದ ಅಧ್ಯಕ್ಷ ಜಯಂತ ನಡುಬೈಲು, ದ.ಕ ಜಿಲ್ಲಾ ಪದ್ಮಶಾಲಿಮಹಾಸಭಾದ ಅಧ್ಯಕ್ಷ ಎಂ.ಜಯರಾಮ ಶೆಡ್ಟಿಗಾರ್, ಉದ್ಯಮಿ ಕೃಷ್ಣಪ್ಪ ಪೂಜಾರಿ, ಮೆಸ್ಕಾಂ ಎ.ಇ. ಚಂದ್ರಶೇಖರ ಕುಳಾಲು, ವಿನಾಯಕ ನಗರ ಗೌರೀಗಣೇಶ ಸೇವಾ ಸಂಘದ ಪ್ರಧಾನ ಕಾರ್ಯದರ್ಶಿ ಸತೀಶ್ ಪೂಜಾರಿ ನೇರೋಳ್ತಡ್ಕ, ಕೆ. ಟಿ. ವೆಂಕಟೇಶ್ವರ ಕರ್ಗಲ್ಲು ನೂಜಿ, ಯೋಗೀಶ್ ಕುಡ್ವ ಕುಂಡಡ್ಕ, ಶ್ರೀಮಂದಾರ ಜೈನ್, ಜಿನ್ನಪ್ಪ ಗೌಡ ಪೆಲತ್ತಿಂಜ, ಚಿದಾನಂದ ಪೆಲತ್ತಿಂಜ, ಶ್ರೀಪತಿನಾಯಕ್ , ಅಶ್ವಿನಿ ಕುಂಡಡ್ಕ, ಪದ್ಮನಾಭ ಚಪಡಿಯಡ್ಕ, ಕೃಷ್ಣಕಿಶೋರ್ ಉಪಸ್ಥಿತರಿದ್ದರು.

Related posts

Leave a Reply