Header Ads
Header Ads
Breaking News

ಕುಂಡಡ್ಕ ಶ್ರೀ ವಿಷ್ಣಮೂರ್ತಿ ದೈವಸ್ಥಾನದ ಪುನಃ ಪ್ರತಿಷ್ಠೆ : ಧರ್ಮ ಸಭೆ ಹಾಗೂ ಸನ್ಮಾನ ಕಾರ್ಯಕ್ರಮ

ವಿಟ್ಲ: ಕುಂಡಡ್ಕ ಶ್ರೀ ವಿಷ್ಣಮೂರ್ತಿ ದೇವಸ್ಥಾನ, ಮಾಡ ಶಿಬರಿಕಲ್ಲ ಶ್ರೀ ಮಲರಾಯ – ಮೂವರ್ ದೈವಂಗಳ ದೈವಸ್ಥಾನ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಅಂಗವಾಗಿ ಧರ್ಮ ಸಭೆ ಹಾಗೂ ಸನ್ಮಾನ ನಡೆಯಿತು.ಶ್ರೀಧಾಮ ಶ್ರೀ ಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡಿ ದೇವಸ್ಥಾನ ಪ್ರೀತಿ ಪ್ರೇಮ ಹರಡುವ ಕೇಂದ್ರವಾಗಬೇಕು. ಸನಾತನ ಹಿಂದೂ ಧರ್ಮದ ನೀತಿ ನಿಯಮಗಳನ್ನು ಪಾಲಿಸಬೇಕು. ಪ್ರತಿಯೊಂದು ವಿಚಾರದಲ್ಲೂ ಒಳ್ಳೆಯದನ್ನು ನೋಡುವ ಕಾರ್ಯವಾಗಬೇಕು. ದೇವರ ಜತೆಗಿನ ನಿರಂತರ ಸಂಪರ್ಕದಿಂದ ನಮ್ಮಲ್ಲಿ ಬದಲಾವಣೆ ತರಲು ಸಾಧ್ಯ ಎಂದು ಹೇಳಿದರು.ಜೇನು ಸಾಕಾಣಿಕೆಯ ಪೂವಪ್ಪ ಪೂಜಾರಿ ಪಿಲಿಂಜ, ಮಾಜಿ ಸೈನಿಕ ಗೋಪಾಲಕೃಷ್ಣ ಭಟ್ ಕಾರ್ಯಾಡಿ, ಕರಾಟೆ ಪಟು ಅನನ್ಯ ನಾಟೆಕಲ್ಲು, ಭೂತಾರಾಧನೆ ಹೊನ್ನಪ್ಪ ನಲಿಕೆ, ಶಿಕ್ಷಣ ಕ್ಷೇತ್ರದ ನಾರಾಯಣ ಪೂಜಾರಿ ಎಸ್. ಕೆ. ಅವರನ್ನು ಸನ್ಮಾನಿಸಲಾಯಿತು. ದೇವಸ್ಥಾನದ ಜೀರ್ಣೋದ್ಧಾರ ರೂವಾರಿ ಕೆ. ಟಿ. ವೆಂಕಟೇಶ್ವರ ಅವರನ್ನು ಗೌರವಿಸಲಾಯಿತು. ಮೂಲ್ಕಿ ಸೀಮೆ ಅರಸರಾದ ಯಂ. ದುಗ್ಗಣ್ಣ ಸಾವಂತರು ಅಧ್ಯಕ್ಷತೆ ವಹಿಸಿದ್ದರು.ಹೊರನಾಡು ಶ್ರೀ ಆದಿಶಕ್ತ್ಯಾತ್ಮಕ ಅನ್ನಪೂರ್ಣೇಶ್ವರಿ ದೇವಸ್ಥಾನದ ಧರ್ಮಕರ್ತ ಡಾ. ಭೀಮೇಶ್ವರ ಜೋಷಿ, ಮುಂಬೈಯ ಉದ್ಯಮಿ ಲೋಕನಾಥ ಶೆಟ್ಟಿ ಮರುವಾಳ, ಮಂಗಳೂರು ಮಹಾನಗರಪಾಲಿಕೆಯ ಜಂಟಿ ಆಯುಕ್ತರಾದ ಗೋಕುಲ್ ದಾಸ್ ನಾಯಕ್, ಪುತ್ತೂರು ಮುಳಿಯ ಜುವೆಲ್ಲರ್ಸ್ ನ ಮುಳಿಯ ಶಾಮ್ ಭಟ್, ಮಂಗಳೂರು ಮರಾಠಿ ಸಮಾಜ ಸೇವಾಸಂಘದ ಸ್ಥಾಪಕಾಧ್ಯಕ್ಷರಾದ ಎಂ.ಎ ನಾಯಕ್, ಅಳಿಕೆ ನೆಕ್ಕಿತಪುಣಿ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಎಂ ಸೀತಾರಾಮ, ತುಳು ತುಡರ್ ಕೂಟ ಸುಳ್ಯ ಇದರ ಅಧ್ಯಕ್ಷ ಜೆ. ಕೆ. ರೈ, ಪ್ರದೀಪ್ ಬಡಕ್ಕಿಲ, ಉದ್ಯಮಿ ದಿವಾಕರ ದಾಸ್ ನೇರ್ಲಾಡಿ, ಜೆಡ್ಡು ಶ್ರೀ ಆದಿಧನ್ವಂತರಿ ಕ್ಷೇತ್ರದ ಧರ್ಮದರ್ಶಿ ಗಣಪತಿ ಭಟ್ ಜೆಡ್ಡು, ಯೋಗೀಶ್ ಕುಡ್ವ,ರೇವತಿ ಕೆ, ನಾಗೇಶ್ ಪಾದೆ, ಶ್ರೀಪತಿ ನಾಯಕ್, ಜತ್ತಪ್ಪ ಅಡ್ಯಾಲು, ಚಿದಾನಂದ ಪೆಲತ್ತಿಂಜ, ಯತೀಶ್ ಕೇದಗೆದಡಿ, ಅಶ್ವಿನಿ ಕುಂಡಡ್ಕ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *