Header Ads
Header Ads
Breaking News

ಕುಂದಾಪುರ:ಒಂದೇ ದಿನದಲ್ಲಿ ಏಳು ಜಾನುವಾರುಗಳ ಮಾರಣಹೋಮ. ಹಲಸಿನ ಹಣ್ಣಿನಲ್ಲಿ ವಿಷ ಹಾಕಿ ಸಾಯಿಸಿರುವ ಶಂಕೆ.

ಕುಂದಾಪುರ: ಬೈಂದೂರು ತಾಲೂಕಿನ ಯಳಜಿತ್ ಗ್ರಾಮಪಂಚಾಯತ್ ವ್ಯಾಪ್ತಿಯ ಕಳಿಹೊಳೆಯ ಹಳ್ಳಿಹೊಸೂರಿನ ಕಾಡಿನಲ್ಲಿ ಏಳು ಜಾನುವಾರುಗಳು ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಜಾನುವಾರುಗಳಿಗೆ ವಿಷ ಹಾಕಿ ಸಾಯಿಸಲಾಗಿದೆ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ. ಬೈಂದೂರು ತೆಗ್ಗರ್ಸೆ ಗ್ರಾಮಪಂಚಾಯತ್ ವ್ಯಾಪ್ತಿಯ ಹಾಲಂಬೇರು ನಿವಾಸಿಗಳಾದ ದಲಿತ ಸಮುದಾಯದ ಸೋಮಶೇಖರ ಎಂಬವರ ಮನೆಯ ಎರಡು ಗಬ್ಬದ ದನ ಹಾಗೂ ಒಂದು ಕರು ಸಾವನ್ನಪ್ಪಿದರೆ, ವಸಂತ ಗಾಣಿಗರ ಒಂದು ಕರು, ಶ್ರೀನಿವಾಸ ಗಾಣಿಗ ಎಂಬವರ ಮನೆಯ ಒಂದು ದನ ಮತ್ತು ಬೇರೆ ಗ್ರಾಮದ ಎರಡು ದನಗಳು ಸಾವನ್ನಪ್ಪಿವೆ. ನಾವು ದಲಿತರು. ನಮಗೆ ಕೃಷಿ ಮತ್ತು ಹೈನುಗಾರಿಕೆಯೇ ಜೀವನಾಧಾರ. ದಿನಾಲು ನಮ್ಮ ದನಗಳನ್ನು ಮೇಯಲು ಬಿಡುತ್ತಿದ್ದೆವು. ಆದರೆ ಕೆಲವರ ಕೆಲವರ ಗದ್ದೆಗಳಿಗೆ ಹೋಗುತ್ತದೆ ಎಂಬ ಕಾರಣಕ್ಕೆ ಹಲಸಿನ ಹಣ್ಣಿನಲ್ಲಿ ವಿಷ ಬೆರಸಿ ದನಗಳಿಗೆ ಕೊಟ್ಟಿರುವ ಶಂಕೆ ವ್ಯಕ್ತವಾಗುತ್ತಿದೆ. ಈ ಬಗ್ಗೆ ಕೂಲಂಕುಶ ತನಿಖೆ ನಡೆಸಿ ನಮಗೆ ಸೂಕ್ತ ಪರಿಹಾರ ಒದಗಿಸಬೇಕೆಂದು ಒತ್ತಾಯಿಸಿದ್ದಾರೆ.

Related posts

Leave a Reply