Header Ads
Header Ads
Breaking News

ಕುಂದಾಪುರ:ಕಾಮಗಾರಿ ನಡೆಸುತ್ತಿರುವಾಗ ವಿದ್ಯುತ್ ಕಂಬಕ್ಕೆ ಢಿಕ್ಕಿಯಾದ ಜೆಸಿಬಿ

ಕುಂದಾಪುರದ ಮೆಸ್ಕಾಂ ಕಚೇರಿ ಬಳಿ ಮಂಗಳವಾರ ಸಂಜೆ ಜೆಸಿಬಿ ಅವಾಂತರದಿಂದ ಆರಕ್ಕೂ ಅಧಿಕ ವಿದ್ಯುತ್ ಕಂಬ ನೆಲಕ್ಕುರುಳಿದ್ದು, ಕುಂದಾಪುರ ಕಗ್ಗತ್ತಲಲ್ಲಿ ಮುಳುಗಿದೆ. ಸಾರ್ವಜನಿಕರಿಗೆ ವಿದ್ಯುತ್ ನೀಡುವ ನಿಟ್ಟಿನಲ್ಲಿ ಬದಲಿ ವ್ಯವಸ್ಥೆಗಾಗಿ ಮೆಸ್ಕಾಂ ಅಧಿಕಾರಿಗಳು ಶ್ರಮಿಸುತ್ತಿದ್ದಾರೆ.

ಬಸ್ರೂರು ಮೂರುಕೈ ಬಳಿ ನವಯುಗ ಕಂಪನಿ ಅಂಡರ್‌ಪಾಸ್ ಕಾಮಗಾರಿ ನಡೆಸುತ್ತಿದ್ದು, ಮಣ್ಣಿನ ಕೆಲಸ ಮಾಡುತ್ತಿದ್ದು, ರಸ್ತೆಯಲ್ಲಿ ಹೋಗುತ್ತಿದ್ದ ಜೆಸಿಬಿ ಬಕೆಟ್ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ವಿದ್ಯುತ್ ಲೈನ್ ಶಾರ್ಟ್ ಸರ್ಕ್ಯೂಟ್ ಆಗಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ನೋಡಿದ ಜೆಸಿಬಿ ಚಾಲಕ ಹೆದರಿ ಜೆಸಿಬಿ ಮತ್ತಷ್ಟು ವೇಗವಾಗಿ ಚಲಾಯಿಸಿದ ಪರಿಣಾಮ ಸುಮಾರು ಆರು ಕಂಬ ನೆಲಕ್ಕೆ ಉರುಳಿದೆ. ವಿದ್ಯುತ್ ತಂತಿ ಧರಾಶಾಹಿಯಾಗಿದ್ದು, ಟಿಸಿ, ಡಿಸಿ ಎಲ್ಲವೂ ಕೆಟ್ಟು ಹೋಗಿದೆ. ಲಕ್ಷಾಂತರ ರೂ ನಷ್ಟ ಸಂಭವಿಸಿದ್ದು, ಮೆಸ್ಕಾಂ ಅಧಿಕಾರಿಗಳು ಬದಲಿ ವ್ಯವಸ್ಥೆಗೆ ಪ್ರಯತ್ನಿಸುತ್ತಿದ್ದಾರೆ. ಮದುವನ ಮೂಲಕ ಕುಂದಾಪುರಕ್ಕೆ ವಿದ್ಯುತ್ ಸರಬರಾಜು ಮಾಡುವ ನಿಟ್ಟಿನಲ್ಲೂ ಅಧಿಕಾರಿಗಳು ಶ್ರಮಿಸುತ್ತಿದ್ದಾರೆ.

Related posts

Leave a Reply