Header Ads
Header Ads
Header Ads
Breaking News

ಕುಂದಾಪುರಕ್ಕೆ ಆಗಮಿಸಿದ ರೆಡ್ ಎಫ಼್.ಎಂನ ರೆಡ್ ರಥ ದಸರಾ ಹಬ್ಬದ ಪ್ರಯುಕ್ತ ರೆಡ್ ರಥ ಆಯೋಜನೆ

 

 ಮಂಗಳೂರಿನ ಪ್ರಸಿದ್ದ ರೇಡಿಯಾ ಸ್ಟೇಶನ್ ರೆಡ್ ಎಫ಼್.ಎಂ ದಸರಾ ಹಬ್ಬದ ಪ್ರಯುಕ್ತ ರೆಡ್ ರಥ ಹಮ್ಮಿಕೊಂಡಿದ್ದು, ಕುಂದಾಪುರಕ್ಕೆ ಆಗಮಿಸಿ ಜನಾಭಿಪ್ರಾಯ ನಡೆಸಿತು.ಕಳೆದ ಐದು ವರ್ಷಗಳಿಂದ ರೆಡ್ ರಥದ ಮೂಲಕ ರೆಡ್ ಎಫ಼್.ಎಂ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದು, ಕುಂದಾಪುರದ ಜನರಿಗೆ ಲೈವ್ ರೇಡಿಯೋ ಸ್ಟೇಶನ್ ಎಕ್ಸಪಿರಿಯನ್ಸ್ ನೀಡಿದ ರೆಡ್ ಎಫ್‌ಎಂ ಆರ್‌ಜೆಗಳು. ವಿನೋಧಾವಳಿಗಳನ್ನ ನಡೆಸುವ ಮೂಲಕ ಕುಂದಾಪುರದ ಜನರ ಮನಸೂರೆಗೊಂಡರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಉಡುಪಿ ಜಿಲ್ಲಾಪಂಚಾಯತ್ ಮಾಜಿ ಅಧ್ಯಕ್ಷ ಕಾಂಗ್ರೆಸ್ ನಾಯಕ ರಾಜೂ ಪೂಜಾರಿ ಲೈವ್ ಸ್ಟೇಶನಲ್ಲಿ ಮಾತನಾಡುವ ಮೂಲಕ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು ದಸರಾದ ಸಂಭ್ರಮದಲ್ಲಿರುವ ಕುಂದಾಪುರಕ್ಕೆ ರೆಡ್‌ಎಫ್‌ಎಂ ರೆಡ್ ರಥ ಹಬ್ಬದ ರಂಗನ್ನೇರಿಸಿದೆ ಎಂದರು.
ಈ ಸಂಧರ್ಭ ಮಾತನಾಡಿದ ಕಲಾಕ್ಷೇತ್ರದ ಅಧ್ಯಕ್ಷ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಕಿಶೋರ್ ಕುಮಾರ್ ಮಾತನಾಡಿ, ದಸರಾ ಹಬ್ಬದಲ್ಲಿ ಕುಂದಾಪುರದಲ್ಲಿ ಹುಲಿ ಕುಣಿತ ವಿಶೇಷ ಸಂಪ್ರದಾಯಿಕ ಹುಲಿ ಕುಣಿತ ಕಾಣಬೇಕಾದರೆ ಕುಂದಾಪುರಕ್ಕೆ ಬರಬೇಕು. ರೆಡ್‌ಎಫ್‌ಎಂ ರೆಡ್ ರಥ ಹುಲಿಕುಣಿತದ ರಂಗನ್ನೇರಿಸಲು ಬಂದಿದ್ದಿರಿ ನಿಮಗೆ ಸ್ವಾಗತವೆಂದರು.

ಆರ್.ಜೆ ಪ್ರಸನ್ನ ನೇತೃತ್ವದ ತಂಡದಲ್ಲಿ ಸ್ಟೇಶನ್ ಹೆಡ್ ಶೋಭಿತ್ ಶೆಟ್ಟಿ, ಆರ್.ಜೆ ರಶ್ಮಿ, ಆರ್.ಜೆ ತ್ರಿಶೂಲ್, ಅರ್.ಜೆ ನಯನ, ಅಶ್ವಿನ್ ಉಪಸ್ಥಿತರಿದ್ದರು.

Related posts

Leave a Reply