Header Ads
Header Ads
Breaking News

ಕುಂದಾಪುರದಲ್ಲಿ ಕಾರ್ಟೂನ್ ಹಬ್ಬ,ಕಲೆಯಲ್ಲಿ ಮನುಷ್ಯ ಆಧ್ಯಾತ್ಮಕ, ಅನಾಮಿಕನಾಗುತ್ತಾನೆ:ಸಾಹಿತಿ ಜಯಂತ ಕಾಯ್ಕಿಣಿ ಹೇಳಿಕೆ

ಕುಂದಾಪುರ: ಸಾಹಿತ್ಯ, ಸಂಗೀತ, ಕ್ರೀಡೆ ಮೊದಲಾದವುಗಳಲ್ಲಿ ತೊಡಗಿಸಿಕೊಳ್ಳುವಾಗ ನಾವು ಅನಾಮಿಕರಾಗಬೇಕು. ಅನಾಮಿಕರಾದರೆ ಮಾತ್ರ ಸಾಧನೆ ಮಾಡಲು ಸಾಧ್ಯ. ಕಲೆಯಲ್ಲಿ ಮನುಷ್ಯ ಜಾತ್ಯತೀತ, ಆಧ್ಯಾತ್ಮಕ, ಅನಾಮಿಕನಾಗುತ್ತಾನೆ ಎಂದು ಸಾಹಿತಿ ಜಯಂತ ಕಾಯ್ಕಿಣಿ ಹೇಳಿದರು.

ಅವರು ಗುರುವಾರ ಇಲ್ಲಿನ ಜೂನಿಯರ್ ಕಾಲೇಜಿನ ರೋಟರಿ ಲಕ್ಷ್ಮೀ ನರಸಿಂಹ ಕಲಾಮಂದಿರದಲ್ಲಿ ಡಿ.6ರಿಂದ ಡಿ.9ರವರೆಗೆ ನಡೆಯುವ ಕುಂದಾಪುರ ಕಾರ್ಟೂನ್ ಹಬ್ಬವನ್ನು ಕಾರ್ಟೂನ್ ಬಿಡಿಸಿ “ನಗುವ ರೇಖೆಗಳು ಮೊಗವನ್ನು ಅರಳಿಸಲಿ” ಎಂಬ ಸಂದೇಶ ಬರೆಯುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು.

ಸತೀಶ್ ಆಚಾರ್ಯ ಅವರು ಕಾರ್ಟೂನ್‌ಗಳ ಮೂಲಕ ಉಳ್ಳವರು ಹಾಗೂ ರಾಜಕಾರಣಿಗಳಿಂದ ಹಾನಿಗೀಡಾದ ವಾತಾವರಣ ಶುಚಿಗೊಳಿಸುವ ಕೆಲಸ ಮಾಡುತ್ತಿದ್ದಾರೆ. ಅದು ಮಾನವೀಯ ಕಣ್ಣುಗಳಿಂದ ನೋಡಿದಾಗಲಷ್ಟೇ ಅದರ ಅರಿವಾಗುತ್ತದೆ. ಬದುಕಿನಲ್ಲಿ ಆಸಕ್ತಿ, ಅನುರಕ್ತಿ ಇದ್ದಾಗ ಬದುಕಿನ ವಿರೋಧಾಭಾಸಗಳು ಹಾಸ್ಯದ ಮೂಲಕ ಪ್ರತಿಫಲಿಸುತ್ತವೆ ಎಂದರು.

 

 

 

 

 

ನಮ್ಮಲ್ಲಿ ಹಾಸ್ಯದ ಕುರಿತು ತಪ್ಪು ಕಲ್ಪನೆಯಿದೆ. ವೈಚಾರಿಕತೆ, ಚಿಂತನಶೀಲತೆಯನ್ನು ಗೇಲಿ ಮಾಡುವ ಕಾಲದಲ್ಲಿದ್ದೇವೆ. ಜನಜೀವನದಲ್ಲಿ ಬೆರೆತು ಒಳಗಿನವರಾಗಿದ್ದು ನಮ್ಮನ್ನು ನಾವು ಗೇಲಿ ಮಾಡಬೇಕು ಎಂದು ಸಾಹಿತಿ ಜಯಂತ ಕಾಯ್ಕಿಣಿ ಹೇಳಿದರು.

ಮುಖ್ಯಅತಿಥಿಗಳಾಗಿ ಮುಂಬೈ ಪತ್ರಕರ್ತ ಶ್ರೀನಿವಾಸ ಜೋಕಟ್ಟೆ, ಛಾಯಾಗ್ರಾಹಕ ಯಜ್ಞ ಮಂಗಳೂರು, ಮುಂಬೈ ಪತ್ರಕರ್ತ ದಯಾಸಾಗರ್ ಚೌಟ, ಪತ್ರಕರ್ತ ಯು.ಕೆ. ಕುಮಾರನಾಥ್, ಹಬ್ಬದ ಸಂಘಟಕ ಕಾರ್ಟೂನಿಸ್ಟ್ ಸತೀಶ್ ಆಚಾರ್ಯ ಉಪಸ್ಥಿತರಿದ್ದರು.

ಮುಂಬೈ ಲೋಕಲ್ ಅನ್ನೋ ಥೀಮ್ ಇಟ್ಕೊಂಡು ಈ ವರ್ಷದ ಕಾರ್ಟೂನು ಹಬ್ಬವನ್ನು ಮುಂಬೈಗೆ ಅರ್ಪಿಸಲಾಗಿದ್ದು ಮಿಡ್‌ಡೇ ಛಾಯಾ ಪತ್ರಕರ್ತ ಸುರೇಶ್ ಕೆ. ಕರ್ಕೇರಾ ಅವರನ್ನು ಸಮ್ಮಾನಿಸಲಾಯಿತು.

ಪತ್ರಕರ್ತ ರಾಮಕೃಷ್ಣ ಹೇರಳೆ ನಿರ್ವಹಿಸಿ, ಗಿರಿಧರ ಕಾರ್ಕಳ ಅತಿಥಿ ಪರಿಚಯ ಮಾಡಿದರು. ಮುಂಬೈನಲ್ಲಿ ಬದುಕನ್ನು ರೂಪಿಸಿಕೊಂಡ ಕಲಾವಿದರ, ಬರಹಗಾರರ, ಪತ್ರಕರ್ತರ ಅನೌಪಚಾರಿಕ ಸಮ್ಮಿಲನದಲ್ಲಿ ಗಿರಿಧರ್ ಕಾರ್ಕಳ, ಅವಿನಾಶ್ ಕಾಮತ್, ಸೋಮಶೇಖರ್ ಪಡುಕೆರೆ, ಶೇಖರ್ ಅಜೆಕಾರ್, ಧನಂಜಯ ಗುರುಪುರ, ಕೇಶವ್ ಸಸಿಹಿತ್ಲು, ಸಂತೋಷ್ ಸಸಿಹಿತ್ಲು, ಸತೀಶ್ ಆಚಾರ್ಯ ಇದ್ದರು.

ಸಂಗೀತ ನಮನ ಕಾರ್ಯಕ್ರಮದಲ್ಲಿ ಜಯಂತ ಕಾಯ್ಕಿಣಿ ಅವರಿಗೆ ಪ್ರಕಾಶ್ ಶೇಟ್ ಅವರಿಂದ ಸಂಗೀತ ನಮನ ಸಲ್ಲಿಸಿದರು. ರಾವ್‌ಬೈಲ್ ಅವರಿಗೆ ಕಾರ್ಟೂನ್ ಕ್ಯಾರಿಕೇಚರ್ ನಮನ ಸಲ್ಲಿಸಲಾಯಿತು.

Related posts

Leave a Reply