Header Ads
Header Ads
Breaking News

ಕುಂದಾಪುರದಲ್ಲಿ ಕೋತಿರಾಜ್ ಪ್ರತ್ಯಕ್ಷ,82 ಅಡಿ ಎತ್ತರದ ಆಂಜನೇಯ ವಿಗ್ರಹ ಏರಿದ ಕೋತಿರಾಜ್.!

ಆಂಜನೇಯ ವಿಗ್ರಹ ಏರಿ ಬೆರಗು ಮೂಡಿಸಿದ ಜ್ಯೋತಿರಾಜ್  ಚಿತ್ರದುರ್ಗದ ಬಂಡೆ, ಗೋಡೆ, ಎತ್ತರದ ಕಟ್ಟಡಗಳನ್ನು ಕ್ಷಣಮಾತ್ರದಲ್ಲಿ ಏರುವ ಜ್ಯೋತಿರಾಜ್ ಯಾನೆ ಕೋತಿರಾಜ್ (30) ಕುಂದಾಪುರ ತಾಲೂಕಿನ ಅತಿ ಎತ್ತರದ ಆಂಜನೇಯ ವಿಗ್ರಹ ಏರುವ ಮೂಲಕ ಬೆರಗು ಮೂಡಿಸಿದ್ರು.

ಕುಂದಾಪುರದ ಹಂಗಳೂರು ಪ್ರಸನ್ನ ಆಂಜನೇಯ ದೇವಸ್ಥಾನದ ಪ್ರತಿಷ್ಠಾ ವರ್ಧಂತ್ಯುತ್ಸವದಲ್ಲಿ ಪಾಲ್ಗೊಂಡ ಸಂದರ್ಭ ದೇವಳದ 82 ಅಡಿ ಎತ್ತರದ ಪ್ರಸನ್ನ ಆಂಜನೇಯ ವಿಗ್ರಹವನ್ನು ನಿರಾಯಾಸವಾಗಿ ಏರಿದ್ರು. ಮಧ್ಯಾಹ್ನದ ಏರು ಹೊತ್ತಲ್ಲಿ ವಿಗ್ರಹದ ಹಿಂಬದಿ ಭಾಗದಿಂದ ಏರಲಾರಂಭಿಸಿದ ಜ್ಯೋತಿರಾಜ್ ಅರ್ಧ ತಾಸಿನಲ್ಲಿ ತುತ್ತ ತುದಿ ತಲುಪಿ ಕೇಸರಿ ಮತ್ತು ರಾಷ್ಟ್ರಧ್ವಜ ಹಾರಿಸಿ ನಗು ಬೀರಿದ್ರು. 2014ರ ಅಗಸ್ಟ್ , 2017ರ ಮೇ ತಿಂಗಳಲ್ಲಿ ಕುಂದಾಪುರಕ್ಕೆ ಆಗಮಿಸಿದ್ದ ಜ್ಯೋತಿರಾಜ್ ಇಲ್ಲಿನ ಶಾಸ್ತ್ರೀವೃತ್ತದ 5 ಅಂತಸ್ತಿನ ಜೆಕೆ ಟವರ್‍ಸ್ ಏರುವ ಮೂಲಕ ಬೆರಗು ಮೂಡಿಸಿದ್ದರು. ಇದೀಗ 3ನೇ ಬಾರಿಗೆ ಕುಂದಾಪುರಕ್ಕೆ ಆಗಮಿಸಿರುವ ಜ್ಯೋತಿರಾಜ್ ತಾಲೂಕಿನ ಅತಿ ಎತ್ತರದ ಆಂಜನೇಯ ವಿಗ್ರಹ ಏರಿ ಅಚ್ಚರಿ ಮೂಡಿಸಿದ್ರು. ಆಂಜನೇಯ ವಿಗ್ರಹ ಏರಿದ ಜ್ಯೋತಿರಾಜ್ ಅವರನ್ನು ದೇವಳದ ಸಂಸ್ಥಾಪಕ ಸುರೇಶ್ ಡಿ. ಪಡುಕೋಣೆ ಗೌರವಿಸಿದ್ರು

Related posts

Leave a Reply