Header Ads
Header Ads
Breaking News

ಕುಂದಾಪುರದಲ್ಲಿ ಡೆಂಗ್ಯೂ, ಚಿಕನ್ ಗುನ್ಯಾ ಮಾಹಿತಿ ಶಿಬಿರ ಖಾರ್ವಿಕೇರಿ ಮಹಾಕಾಳಿ ದೇವಳದಲ್ಲಿ ನಡೆದ ಶಿಬಿರ

 

ಕುಂದಾಪುರ: ಡೆಂಗ್ಯೂ ಮತ್ತು ಚಿಕನ್‌ಗುನ್ಯ ಕುರಿತು ಮಾಹಿತಿ ನೀಡುವ ನಿಟ್ಟಿನಲ್ಲಿ ಡೆಂಗ್ಯೂ ಮಾಹಿತಿ ಶಿಬಿರ ಆರೋಗ್ಯ ಇಲಾಖೆ ಮತ್ತು ಕುಂದಾಪುರ ಪುರಸಭೆ ಆಶ್ರಯದಲ್ಲಿ ಖಾರ್ವಿಕೇರಿ ಮಹಾಕಾಳಿ ದೇವಳದ ಆವರಣದಲ್ಲಿ ನಡೆಯಿತು.


ಈ ಸಂದರ್ಭ ಮಾತನಾಡಿದ ವೈದ್ಯಾಧಿಕಾರಿ ಡಾ.ಪ್ರೇಮಾನಂದ ಡೆಂಗ್ಯೂ ಮತ್ತು ಚಿಕನ್‌ಗುನ್ಯ ಸೊಳ್ಳೆಗಳು ಶುದ್ದ ನೀರಿನಲ್ಲಿ ಉತ್ಪತ್ತಿಗೊಳ್ಳುತ್ತದೆ. ಒಂದು ವಾರದಲ್ಲಿ ದೊಡ್ಡ ಸೊಳ್ಳೆಯಾಗಿ ಬೆಳೆಯುವ ಈ ಸೊಳ್ಳೆಗಳು, ಬಹಳ ಅಪಾಯಾಕಾರಿ ಹಗಲು ಹೊತ್ತಿನಲ್ಲಿ ಈ ಸೊಳ್ಳೆಗಳು ಕಚ್ಚುತ್ತದೆ. ಈ ಸೊಳ್ಳೆಗಳು ಮೂನ್ನೂರು ಮೀಟರ್ ವ್ಯಾಪ್ತಿಯೊಳಗೆ ಮಾತ್ರ ಇರುತ್ತದೆ. ಹಾಗಾಗಿ ಒಂದು ವೇಳೆ ಡೆಂಗ್ಯೂ ಚಿಕನ್‌ಗುನ್ಯ ಪ್ರಕರಣಗಳು ಪತ್ತೆಯಾದಲ್ಲಿ ಆ ಸೊಳ್ಳೆಗಳು ಆಪ್ರದೇಶದಲ್ಲಿ ಪರಿಹಾರವಿರುತ್ತದೆ. ಆದ್ದರಿಂದ ಮನೆ ಸುತ್ತಮುತ್ತ ನೀರು ನಿಲ್ಲದಂತೆ ಎಚ್ಚರಿಕೆ ವಹಿಸಬೇಕು ಎಂದರು
ಸಭೆಯ ಅಧ್ಯಕ್ಷತೆಯನ್ನು ಪುರಸಭಾಧ್ಯಕ್ಷೆ ವಸಂತಿ ಮೋಹನ್ ಸಾರಂಗ್ ವಹಿಸಿದ್ದರು. ಕಾರ್ಯಕ್ರಮದಲ್ಲಿ ಪುರಸಭಾ ಉಪಾಧ್ಯಕ್ಷ ರಾಜೇಶ್ ಕಾವೇರಿ, ತಾಲೂಕು ಆಸ್ಪತ್ರೆಯ ಮುಖ್ಯವೈದ್ಯಾಧಿಕಾರಿ ರಾಬರ್ಟ್ ರೆಬೆಲ್ಲೋ, ಸೇರಿದಂತೆ ಹಲವು ಪುರಸಭಾ ಸದಸ್ಯರು ಭಾಗವಹಿಸಿದ್ದರು.

Related posts

Leave a Reply