Header Ads
Header Ads
Breaking News

ಕುಂದಾಪುರದಲ್ಲಿ ತ್ರಿವಳಿ ತಲಾಖ್ ವಿರುದ್ಧ ದಾಖಲಾದ ಮೊದಲ ಪ್ರಕರಣ

ಉಡುಪಿ ಜಿಲ್ಲೆಯಲ್ಲಿಯೇ ತ್ರಿವಳಿ ತಲಾಖ್ ವಿರುದ್ಧ ದಾಖಲಾದ ಮೊದಲ ಪ್ರಕರಣಕ್ಕೆ ಕುಂದಾಪುರ ಪೊಲೀಸ್ ಠಾಣೆ ಸಾಕ್ಷಿಯಾಗಿದೆ. ಅಲ್ಲದೆ ರಾಜ್ಯದ ಮಟ್ಟಿಗೆ ತ್ರಿವಳಿ ತಲಾಖ್ ವಿಚಾರದಲ್ಲಿ ದೂರು ದಾಖಲಾದ ಎರಡನೇ ಪ್ರಕರಣವಾಗಿದೆ. ತ್ರಿವಳಿ ತಲಾಖ್ ನೀಡಿದ ಪತಿಯ ವಿರುದ್ಧ ಮುಸ್ಲಿಂ ಮಹಿಳೆಯೊಬ್ಬರು ಕುಂದಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು ಆ ದೂರಿನಂತೆ ಆರೋಪಿ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ.ಸಂತ್ರಸ್ತೆಯಾದ ಮೂಡುಗೋಪಾಡಿಯ ನಿವಾಸಿ ಅಲ್ಫಿಯಾ ಅಖ್ತರ್ (29) ಎನ್ನುವಾಕೆ ತನ್ನ ಪತಿ ಹಾಗೂ ಆತನ ಕುಟುಂಬಿಕರ ವಿರುದ್ದ ದೂರು ನೀಡಿದವರು. ಹಿರಿಯಡ್ಕ ನಿವಾಸಿಗಳಾದ ಸಂತ್ರಸ್ತೆ ಪತಿ ಹನೀಫ್ ಸಯ್ಯದ್(32) ಸದ್ಯ ಬಂಧಿತನಾದ ಆರೋಪಿ. ಮಾವ ಅಬ್ಬಾಸ್ ಸಯ್ಯದ್, ಅತ್ತೆ ಜೈತುನ್ ಹಾಗೂ ಪತಿಯ ಅಕ್ಕ ಆಯೇಷಾ ವಿರುದ್ಧವೂ ದೂರು ನೀಡಲಾಗಿದೆ. ಸಂತ್ರಸ್ತ ಮಹಿಳೆ ಕುಟುಂಬಿಕರ ಜೊತೆ ಕುಂದಾಪುರದ ಖ್ಯಾತ ನ್ಯಾಯವಾದಿ ರವಿಕಿರಣ್ ಮುರ್ಡೇಶ್ವರ್ ಅವರ ಬಳಿ ಬರುತ್ತಾರೆ. ನ್ಯಾಯವಾದಿಗಳ ಬಳಿ ಸಮಸ್ಯೆ ಹೇಳಿಕೊಂಡಿದ್ದು ಅವರು ನೀಡಿದ ಕಾನೂನು ಸಲಹೆಯಂತೆ ದೂರು ನೀಡುತ್ತಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡ ಕುಂದಾಪುರ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ

Related posts

Leave a Reply

Your email address will not be published. Required fields are marked *