Breaking News

ಕುಂದಾಪುರದಲ್ಲಿ ದಲಿತ ಕುಂದು ಕೊರತೆ ಜನಸಂಪರ್ಕ ಸಭೆ, ಪೋಲೀಸರಿಂದ ಸಮಸ್ಯೆಗಳ ಅಹವಾಲು ಸ್ವೀಕಾರ


ದಲಿತ ಕುಂದು ಕೊರತೆಗಳ ಪೊಲೀಸ್ ಜನಸಂಪರ್ಕ ಸಭೆ ಕುಂದಾಪುರದ ಅಂಬೇಡ್ಕರ್ ಭವನದಲ್ಲಿ ಜರಗಿತು. ಕುಂದಾಪುರ ಉಪ ವಲಯದ ಪೊಲೀಸ್ ಡಿವೈಎಸ್‌ಪಿ ಪ್ರವೀಣ್ ಬಿ. ನಾಯಕ್ ಅವರು ದಲಿತ ಮುಖಂಡರುಗಳು ಹಾಗೂ ಸಮಸ್ಯೆಗೆ ಒಳಗಾದವರ ಪ್ರಶ್ನೆಗಳನ್ನು ಆಲಿಸಿ ಸಮಸ್ಯೆಗಳನ್ನು ಪರಿಹರಿಸುವ ಬಗ್ಗೆ ತಿಳಿ ಹೇಳಿದರು.
ದಲಿತ ಂಪರ್ಕ ಸಭೆಗಳನ್ನು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆಸಿದಲ್ಲಿ ಈ ವ್ಯಾಪ್ತಿಯ ಜನರು ಅಲ್ಲಿ ಸೇರಿ ತಮ್ಮ ಸಮಸ್ಯೆಗಳ ಬಗ್ಗೆ ಪರಿಹಾರ ಕಂಡುಕೊಳ್ಳಲು ಸುಲಭ ಸಾಧ್ಯ ಎಂದು ನವೀನ್ಚಂದ್ರ ಕಾಳಾವಾರ್ಕರ್ ಹೇಳಿದರು. ಇದಕ್ಕೆ ಉತ್ತರಿಸಿದ ಡಿವೈಎಸ್‌ಪಿ ಆಯಾ ಠಾಣಾ ವ್ಯಾಪ್ತಿಯಲ್ಲಿ ತಿಂಗಳಿಗೊಮ್ಮೆ ಸಭೆ ನಡೆಸಲಾಗುತ್ತದೆ. ಅಲ್ಲದೇ ಬೀಟ್ ಪೊಲೀಸರು ಆಯಾ ಗ್ರಾಮಗಳನ್ನು ಭೇಟಿ ಮಾಡಿದಾಗ ಅಲ್ಲಿ ಕೆಲವು ಜನರನ್ನು ಸೇರಿಸಿಕೊಂಡು ಸಣ್ಣ ಮಟ್ಟದ ಸಭೆ ನಡೆಸಲಾಗುತ್ತದೆ. ಇಲ್ಲಿನ ಸ್ಥಳೀಯ ಜನರನ್ನು ಸೇರಿಸಿಕೊಂಡು ಚರ್ಚೆ ನಡೆಸಲಾಗುವುದು ಎಂದರು.
ದಲಿತ ದೌರ್ಜನ್ಯವನ್ನು ಕೇವಲ ಜಾತಿಯ ಹೆಸರಿನಡಿ ತರದೇ ಸುಳ್ಳು ಸಾಕ್ಷಿಗಳನ್ನು ನೀಡುವುದು, ತೇಜೋವಧೆ ಮಾಡುವುದು ಕೂಡಾ ದಲಿತ ದೌರ್ಜನ್ಯದಡಿ ಬರುತ್ತದೆ. ಇದನ್ನು ಮನಗಂಡು ಈ ಅಂಶಗಳನ್ನು ಕೆಲವು ಪ್ರಕರಣಗಳಲ್ಲಿ ಕಂಡುಕೊಳ್ಳಬೇಕು ಎಂದು ದಲಿತ ಮುಖಂಡ ಉದಯ ಕುಮಾರ್ ಹೇಳಿದರು. ನೆಂಪು ಸರಕಾರಿ ಪ. ಪೂ. ಕಾಲೇಜಿನ ಕ್ರೀಡಾಂಗಣದಲ್ಲಿ ಒಂದು ತೆರೆದ ಬಾವಿ ಇದೆ ಇದು ಅಪಾಯಕ್ಕೆ ಕರೆಗಂಟೆಯಾಗಿದೆ, ಕೂಡಲೇ ತಡೆಬೇಲಿ ಹಾಕಬೇಕು ಎಂದು ಕೇಳಿಕೊಂಡಿದ್ದರೂ ಈ ತನಕ ತಡೆಬೇಲಿ ಹಾಕಿಲ್ಲ. ಈ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು ಎಂದು ದಲಿತ ಮುಖಂಡರೊಬ್ಬರು ಕೇಳಿಕೊಂಡರು.

Related posts

Leave a Reply