Header Ads
Header Ads
Breaking News

ಕುಂದಾಪುರದಲ್ಲಿ ರಸ್ತೆ ಸುರಕ್ಷತಾ ಸಭೆ. ಅಂಗಡಿ ಮಾಲಿಕರು ಪಾರ್ಕಿಂಗ್‌ಗೆ ವ್ಯವಸ್ಥೆ ಮಾಡಿ. ಅಂಗಡಿ ಮುಂದೆ ನಿಂತ ಆಟೋರಿಕ್ಷಾಕ್ಕೆ ದಂಡ ವಿಧಿಸುತ್ತಾರೆ.

ಕಟ್ಟಡ ಮಾಲಿಕರು ಪಾರ್ಕಿಂಗ್ ವ್ಯವಸ್ಥೆಯನ್ನು ಮಾಡಿಕೊಳ್ಳಬೇಕು. ಪಾರ್ಕಿಂಗ್ ವ್ಯವಸ್ಥೆ ಮಾಡಿಕೊಳ್ಳದ ಕಟ್ಟಡಗಳಿಗೆ ಪರವಾನಿಗೆ ನೀಡುವ ಮೂಲಕ ಪುರಸಭೆಯೇ ಟ್ರಾಫಿಕ್ ಸಮಸ್ಯೆ ಸೃಷ್ಟಿಸಿದೆ. ಪೊಲೀಸರು ಆಟೋರಿಕ್ಷಾ ಚಾಲಕರಿಗೆ ದಂಡ ಹಾಕುತ್ತಾರೆ. ವಾಹನ ನಿಲುಗಡೆಗೆ ಅವಕಾಶ ಇಲ್ಲದ ಅಂಗಡಿ ಮಾಲಿಕರಿಗೆ ಏಕೆ ದಂಡ ಹಾಕುತ್ತಿಲ್ಲಾ ಎಂದು ರಸ್ತೆ ಸುರಕ್ಷತಾ ಸಭೆಯಲ್ಲಿ ಸಾರ್ವಜನಿಕರ ಪ್ರಶ್ನೆ.ಕುಂದಾಪುರ ತಾಲೂಕು ಪಂಚಾಯಿತಿ ಡಾ.ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ನಡೆದ ಸಂಚಾರಿ ನಿರ್ವಹಣೆ ಹಾಗೂ ರಸ್ತೆ ಸುರಕ್ಷತಾ ಸಭೆಯಲ್ಲಿ ಸಾರ್ವಜನಿಕರು ಮಾಡಿದ ಆರೋಪದ ಪಟ್ಟಿ. ಕಟಗ್ಟಡಗಳು ವಾಹನ ಪಾರ್ಕ್ ವ್ಯವಸ್ಥೆ ಒಳಗೊಂಡಿರಬೇಕು ಎನ್ನುವ ನಿಯಮ ಪುರಸಭೆ ಪಾಲಿಸದೆ ಪರವಾನಿಗೆ ನೀಡುತ್ತಿರುವುದು ಟ್ರಾಫಿಕ್ ಸಮಸ್ಯೆಗೆ ಮೂಲ ಕಾರಣ. ಅಂಗಡಿ, ಮುಂಗಟ್ಟು ವಾಣಿಜ್ಯ ವ್ಯವಹಾರಗಳ ಸ್ಥಳದಲ್ಲಿ ವಾಹನ ಪಾರ್ಕ್ ಅವರ ಜವಾಬ್ದಾರಿಯಾಗಿದ್ದರೂ, ಯಾವ ಕಟ್ಟಡಕ್ಕೂ ಈ ನಿಯಮ ಅನ್ವಯಿಸೋದಿಲ್ಲ್ಲ ಎಂದು ರಿಕ್ಷಾ ಚಾಲಕ ಅಣ್ಣಪ್ಪ ಪ್ರಶ್ನಿಸಿದರು.ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ವಾಹನ ನಿಲುಗಡೆಗೆ ಅವಕಾಶ, ಒಂದುಕಡೆ ಟೂ ವೀಲರ್ ಮತ್ತೊಂದು ಕಡೆ ನಾಲ್ಕು ಚಕ್ರದ ವಾಹನ ನಿಲುಗಡೆ, ಸರ್ವೀಸ್ ರಸ್ತೆಯಲ್ಲಿ ವಾಹನ ನಿಲುಗಡೆ ನಿಶೇಧ, ಸ್ಪೀಡ್ ಬ್ರೇಕರ್ ಅಳವಡಿಕೆ, ಸರ್ವೀಸ್ ಬಸ್ ಸ್ಟ್ಯಾಂಡ್ ಸ್ಥಳಾಂತರ, ಹೆದ್ದಾರಿ ಕಾಮಗಾರಿ ವಿಳಂಬ ಮುಂತಾದ ವಿಷಯಗಳ ಬಗ್ಗೆ ಸಭೆಯಲ್ಲಿ ಚರ್ಚೆ ಮಾಡಲಾಯಿತು.ಕುಂದಾಪುರ ಉಪವಿಭಾಗಾಧಿಕಾರಿ ಟಿ.ಭೂಬಾಲನ್ ಅಧ್ಯಕ್ಷತೆ ವಹಿಸಿದ್ದರು. ಡಿಎಸ್ಪಿ ಬಿ.ಪಿ.ದಿನೇಶ್ ಕುಮಾರ್, ಕುಂದಾಪುರ ಇಒ ಕಿರಣ್ ಫೆಡ್ನೇಕರ್ ಇದ್ದರು.

Related posts

Leave a Reply