Header Ads
Header Ads
Breaking News

ಕುಂದಾಪುರದಲ್ಲಿ ವಿವಿಧ ಬೇಡಿಕೆ ಈಡೇರಿಕೆ ಆಗ್ರಹಿಸಿ ಪ್ರತಿಭಟನೆ ಅಂಗನವಾಡಿ ಕಾರ್ಯಕರ್ತೆಯರಿಂದ ಪ್ರತಿಭಟನೆ.

ಕುಂದಾಪುರ: ಹದಿನೈದು ನ್ಯಾಯಯುತ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಕುಂದಾಪುರ ತಾಲೂಕು ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸಂಘದ ನೇತೃತ್ವದಲ್ಲಿ ಕುಂದಾಪುರ ಮಿನಿ ವಿಧಾನ ಸೌಧದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.ಸುರಿಯುವ ಮಳೆಯಲ್ಲೂ ನೂರಾರು ಸಂಖ್ಯೆಯಲ್ಲಿ ಕುಂದಾಪುರ ತಾಲೂಕು ಪಂಚಾಯತ್ ಎದುರು ಜಮಾಯಿಸಿದ ಅಂಗನವಾಡಿ ನೌಕರರು ಕಾಲ್ನಡಿಗೆ ಜಾಥಾದ ಮೂಲಕ ಸಾಗಿ ಮಿನಿ ವಿಧಾನ ಸೌಧದೆದುರು ಪ್ರತಿಭಟನೆ ನಡೆಸಿದರು. ಅಂಗನವಾಡಿ ನೌಕರರ ಸಂಘದ ತಾಲೂಕು ಅಧ್ಯಕ್ಷೆ ಪೀಲೋಮಿನಾ ಫೆರ್ನಾಂಡೀಸ್ ಗಂಗೊಳ್ಳಿ ಮಾತನಾಡಿ, ಈಗಾಗಲೇ ಸೇವೆ ಸಲ್ಲಿಸಿ ನಿವೃತ್ತಿಯಾಗಿರುವ ಮತ್ತು ಮುಂದಿನ ದಿನಗಳಲ್ಲಿ ನಿವೃತ್ತಿಯಾಗಲಿರುವ ಕಾರ್ಯಕರ್ತೆ ಹಾಗೂ ಸಹಾಯಕಿಯರಿಗೆ ಕನಿಷ್ಠ ಮಾಸಿಕ ಪಿಂಚಣಿ ರೂ. 6,000 ಮಾಡಬೇಕು. ಪ್ರತಿ ತಿಂಗಳ ಗೌರವ ಧನ ಹಾಗೂ ಮೊಟ್ಟೆ ಹಣವನ್ನು ಪ್ರತೀ ತಿಂಗಳ ಐದನೇ ತಾರೀಕಿನೊಳಗೆ ನೀಡುವಂತೆ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಬಳಿಕ ಕುಂದಾಪುರ ಸಹಾಯಕ ಆಯುಕ್ತ ಭೂಬಾಲನ್ ಅವರಿಗೆ ಮನವಿ ಸಲ್ಲಿಸಿದರು.ಪ್ರತಿಭಟನೆಯಲ್ಲಿ ನಾಗರತ್ನ ಹವಾಲ್ದಾರ್, ಶೋಭಾ, ಗುಲಾಬಿ ಬೆಳ್ವೆ, ಪದ್ಮಾವತಿ ಶೆಡ್ತಿ ಬಾಳಿಕೆರೆ, ದಾಕ್ಷಾಯಿನಿ, ಸವಿತಾ ಬಸ್ರೂರು, ಇಂದಿರಾ ಬೈಂದೂರು, ನಾಗರತ್ನ ತೆಂಕಬೆಟ್ಟು, ಶೋಭಾ ಮೊವಾಡಿ ಮೊದಲಾದವರು ಉಪಸ್ಥಿತರಿದ್ದರು.

Related posts

Leave a Reply