Header Ads
Header Ads
Header Ads
Breaking News

ಕುಂದಾಪುರದಲ್ಲಿ ಹುಲಿವೇಷ ಕುಣಿತ ಹುಲಿ ಕುಣಿತಕ್ಕೆ ಹೆಜ್ಜೆ ಹಾಕಿದ ಪುಟಾಣಿ ಮಕ್ಕಳು

 ಹುಲಿಗಳು ಎಂದರೆ ಪ್ರತಿಯೊಬ್ಬನ ಎದ್ದೆ ಝಲ್ಲೇನಿಸುತ್ತದೆ. ಆದರೆ ಹುಲಿ ಕುಣಿತವೆಂದರೆ ತಾಸೆ ಪೆಟ್ಟಿ ಪ್ರತಿಯೊಬ್ಬನಿಗೂ ಹೆಜ್ಜೆ ಹಾಕಬೇಕೆನಿಸುತ್ತದೆ. ಅಳಿವಿನಂಚಿನಲ್ಲಿರುವ ಕುಂದಾಪ್ರದ ಹುಲಿ ಕುಣಿತವನ್ನ ಪುನಃ ಸಂಘಟಿಸುವಲ್ಲಿ ಕುಂದಾಪುರದ ಕಲಾ ಕ್ಷೇತ್ರ ವಿಶೇಷ ಮುತುವರ್ಜಿ ವಹಿಸಿ ಪ್ರತಿವರ್ಷ ಹುಲಿಕುಣಿತವನ್ನ ಆಯೋಜಿಸುತ್ತಿದೆ. 
 ಕೃಷ್ಣ ಜನ್ಮಾಷ್ಟಮಿ, ಚೌತಿ ಮೊದಲಾದ ಹಬ್ಬಕ್ಕೆ ಹೊರ ಬರುವ ಹುಲಿಗಳನ್ನ ನೀವು ಕಂಡಿದ್ದಿರಿ ಆದರೆ ದಸರಾ ಹಬ್ಬಕ್ಕೆಂದೆ ಹೊರ ಬರುವ ಹುಲಿಗಳನ್ನ ನೀವು ನೋಡಿರಲಿಕ್ಕಿಲ್ಲ. ಅದು ನಿಮಗೆ ಸಿಗೋದು ಕುಂದಾಪುರದಲ್ಲಿ ಮಾತ್ರ. ನವರಾತ್ರಿಯಲ್ಲಿ ದುರ್ಗೆಯ ವಾಹನವಾಗುವ ಹರಕೆಯ ಹುಲಿಗಳು

 ಮೂನ್ನೂರು ವರ್ಷಗಳ ಇತಿಹಾಸವಿರುವ ಈ ಹುಲಿಗಳು ಒಂದೇ ಕುಟುಂಬದವರು. ನವರಾತ್ರಿಯಂದು ದುರ್ಗೆಯ ವಾಹನವಾಗಿ ಬರುವ ಈ ಹುಲಿಗಳಿಗೆ ಒಂದು ಸಂಪ್ರದಾಯವಿದೆ, ಕಟ್ಟುಪಾಡಿದೆ. ನೃತ್ಯಕ್ಕೂ ಕೂಡ ಒಂದು ಶೈಲಿಯಿದೆ. ಕಳೆದ ಐದು ವರ್ಷಗಳ ಹಿಂದೆ ಅಳಿವಿನಂಚಿಗೆ ಬಂದ ಈ ಹುಲಿ ನೃತ್ಯವನ್ನ ಉಳಿಸುವ ಉದ್ದೇಶದಿಂದ ಕುಂದಾಪುರದ ಕಲಾ ಕ್ಷೇತ್ರ ಈ ಹುಲಿ ವೇಷಧಾರಿಗಳಿಗೆ ಒಂದು ವೇದಿಕೆ ಕಲ್ಪಿಸಿಕೊಟ್ಟಿದೆ.

 ಸಸ್ಯ ಜನ್ಯ ವಸ್ತುಗಳಿಂದ ಬಣ್ಣ ತಯಾರಿಸಿ ಇದ್ದಿಲಿನಿಂದ ಕರಿಪಟ್ಟೆ ಧರಿಸುತ್ತಿದ್ದ ಕಾಲದಿಂದ ಕೃತಕ ಬಣ್ಣ ಬಳಿದುಕೊಳ್ಳುವ ಕಾಲ ಬಂದರೂ ಪೂರ್ವಜರೂ ಹಾಕಿಕೊಟ್ಟ ರಿವಾಜನ್ನ ಈ ಹುಲಿಗಳು ಬಿಟ್ಟಿಲ್ಲ. ಬಣ್ಣವನ್ನು ಬಳಿಕೊಳ್ಳುವ ಮುನ್ನ ದೇಹದಲ್ಲಿರುವ ಎಲ್ಲಾ ಕೂದಲುಗಳನ್ನ ತೆಗೆದು ನಂತರ ಬಣ್ಣ ಬಳಿದುಕೊಳ್ಳುತ್ತಾರೆ. ದಸರಾ ಬಿಟ್ಟು ಬೇರಾವ ಹಬ್ಬಕ್ಕೂ ಕೂಡ ಈ ಸಂಪ್ರದಾಯ ಬದ್ದ ಹುಲಿ ವೇಷ ಧರಿಸುವುದಿಲ್ಲ. ಸಂಪ್ರದಾಯ ಬದ್ದ ಹುಲಿಗಳ ಕುಣಿತಕ್ಕೆ ಇರುವುದು ೫೪ ಹೆಜ್ಜೆ. ಈ ಹುಲಿಗಳ ಕುಣಿತಕ್ಕೆ ಸಾಥ್ ನೀಡಲು ತಾಸೆಯೊಂದಿಗೆ ವಾಧ್ಯ ಕೂಡ ಬೇಕು ಇದು ನಮ್ಮ ಕುಂದಾಪ್ರದ ಹುಲಿಗಳ ವಿಶೇಷ

ಈ ಹಿಂದೆ ಸುಂಬ, ಕೊರಗ, ರಾಜೀವ ಮತ್ತು ನೀಲ ಇವರ ಹುಲಿ ವೇಷಗಳು ಕುಂದಾಪುರವನ್ನೇ ಸ್ಥಬ್ದಗೊಳಿಸುತ್ತಿತ್ತು. ಅಂತಹ ಹುಲಿವೇಷಧಾರಿಗಳನ್ನ ಕುಂದಾಪುರ ಕಂಡಿತ್ತು. ಈಗ ನಾಲ್ಕನೇ ತಲೆಮಾರಿನ ಹುಲಿಗಳು ತಮ್ಮ ಸಂಪ್ರದಾಯವನ್ನ ಮುಂದುವರಿಸಿಕೊಂಡು ಬಂದಿದೆ. ಹಣಕಾಸಿನ ಅಡಚಣೆ ಮತ್ತು ವೇಷ ಧರಿಸಿದ ಮೇಲೆ ಅನುಭವಿಸುವ ನೋವಿನಿಂದ ಬೇಸತ್ತು ಕುಂದಾಪುರದ ಹುಲಿಗಳ ಘರ್ಜನೆ ನಿಲ್ಲಿಸುವ ಹಂತಕ್ಕೆ ತಲುಪಿದ್ದರು. ಆದರೆ ಕಲಾಕ್ಷೇತ್ರ ಸಂಘಟನೆಯವರು ಕುಂದಾಪುರದ ಹುಲಿಗಳು ಬೇರೆ ಹುಲಿಗಳಿಗಿಂತ ಭಿನ್ನ. ಈ ಹುಲಿಗಳ ಸಂಪ್ರದಾಯ ಉಳಿಯಬೇಕೆಂದು ವೇದಿಕೆಯನ್ನ ಕಲ್ಪಿಸಿಕೊಟ್ಟಿದ್ದಾರೆ. ಮುಂದೆಯೂ ಕೂಡ ಕುಂದಾಪುರದ ಹುಲಿಗಳಿಗೆ ಇತರ ಸಂಘಟನೆಗಳು ಕೂಡ ಸಹಕಾರ ನೀಡಲಿ ಎನ್ನುವುದು ನಮ್ಮ ಆಶಯ.

Related posts

Leave a Reply