Header Ads
Header Ads
Header Ads
Breaking News

ಕುಂದಾಪುರದ ಅಜ್ರಿಯ ಮನೆ ಕಳ್ಳತನ ಪ್ರಕರಣ: ಆರೋಪಿಯ ಬಂಧನ

ಕುಂದಾಪುರದ ಆಜ್ರಿ ಗ್ರಾಮದ ಹೆದ್ದಾರಿಮನೆಯಲ್ಲಿ ಕಳ್ಳತನ ನಡೆಸಿದ ಆರೋಪಿಯನ್ನ ಬಂಧಿಸುವಲ್ಲಿ ಶಂಕರನಾರಾಯಣ ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ.


ಹೆದ್ದಾರಿ ಮಬೆ ನಿವಾಸಿ ಮಾಲತಿ ಕುಲಾಲ್ ಎಂಬುವವರ ಮನೆಯ ಹಿಂದಿನಬಾಗಿಲಿನಿಂದ ಪ್ರವೇಶಿಸಿ ಆರೋಪಿ ಪ್ರದೀಪ್ ಶೆಟ್ಟಿ 4 ಬಳೆ, ಉಂಗುರ, 4 ಕೊತ್ತಂಬರಿ ಸರ ಮತ್ತು 13,000 ನಗದನ್ನ ಕಳವು ಮಾಡಿದ್ದ. ಆಜ್ರಿ ಹೆಗ್ಡೆಯವರ ಮನೆಯಲ್ಲಿ ಪೊಲೀಸರು ಆರೋಪಿಯನ್ನ ಬಂಧಿಸಿದ್ದಾರೆ. ಬಂಧಿತ ಆರೋಪಿಯಿಂದ ಕಳವಾದ ವಸ್ತುವಿನೊಂದಿಗೆ 54,000 ನಗದನ್ನು ವಶಪಡಿಸಿಕೊಳ್ಳಲಾಗಿದೆ. ಕಾರ್ಯಾಚರಣೆಯಲ್ಲಿ ಎಸ್ಪಿ ಸಂಜೀವ್ ಪಾಟೀಲ್ ಮಾರ್ಗದಶನದಲ್ಲಿ ಶಂಕರನಾರಾಯಣ ಠಾಣೆ ಪಿಎಸ್‌ಐ ಸುನೀಲ್ ಮತ್ತು ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ವರದಿ: ಹರೀಶ್ ಕಿರಣ್ ತುಂಗ ಕುಂದಾಪುರ

Related posts

Leave a Reply