Header Ads
Breaking News

ಕುಂದಾಪುರದ ಕೆದೂರು ಗ್ರಾಮದ ಕೊರಗರ ಕಾಲನಿ ಸಮಸ್ಯೆ: ಐಟಿಡಿಪಿ ಅಧಿಕಾರಿಗಳಿಂದ 2ದಿನಗಳಲ್ಲಿ ಕ್ರಮದ ಭರವಸೆ

ಕುಂದಾಪುರದ ಕೆದೂರು ಗ್ರಾಮದಲ್ಲಿ ಮೂಲಭೂತ ಸೌಕರ್ಯಗಳಿಲ್ಲದೆ ಪರದಾಡುತ್ತಿರುವ ಕೊರಗ ಕುಟುಂಬಗಳಿಗೆ ಮನೆ ನಿರ್ಮಾಣಕ್ಕೆ ಇನ್ನೆರಡು ದಿನಗಳಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಐಟಿಡಿಪಿ ಇಲಾಖೆ ಅಧಿಕಾರಿ ವಿಶ್ವನಾಥ್ ಶೆಟ್ಟಿ ಭರವಸೆ ನಿಡಿದ್ದಾರೆ. ಈ ಬಗ್ಗೆ ವಿ೪ ನ್ಯೂಸ್ ಪ್ರಕಟಿಸಿದ್ದ ವಿಸ್ತೃತ ವರದಿಯ ಬಗ್ಗೆ ಮಾತನಾಡಿದ ಅವರು, ಈಗಾಗಲೇ ಅಧಿಕಾರಿಗಳು ಸಮಸ್ಯೆ ಇರುವ ಪ್ರದೇಶಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ನಿರಂತರವಾಗಿ ಬಿತ್ತರವಾದ ವರದಿಗಳಿಂದ ಸಮಸ್ಯೆ ಗಮನಕ್ಕೆ ಬಂದಿದ್ದು ಕ್ರಮ ಕೈಗೊಳ್ಳಲಾಗಿದೆ. ಮನೆಗಳ ನಿರ್ಮಾಣಕ್ಕೆ ಅನುದಾನಗಳು ಮಂಜೂರಾಗಿವೆ. ಇನ್ನೆರಡು ದಿನಗಳಲ್ಲಿ ಸೂಕ್ತವಾದ ದಾಖಲೆಪತ್ರಗಳನ್ನು ಸಿದ್ಧಪಡಿಸಲಾಗುವುದು ಎಂದು ಹೇಳಿದರು. 

Related posts

Leave a Reply

Your email address will not be published. Required fields are marked *